ಶ್ರೀ ವೈ. ನಾಗೇಶ ಶಾಸ್ತ್ರಿ ಸಾಹಿತ್ಯ ಸಂಘದ ನೂತನ ಅಧ್ಯಕ್ಷರಾಗಿ ಡಾ.ಎಸ್. ಮಂಜುನಾಥ ಆಯ್ಕೆ

ಬಳ್ಳಾರಿ, ಜು.9: ನಗರದ ಶ್ರ್ರೀ ವೈ ನಾಗೇಶ ಶಾಸ್ತ್ರಿ ಸಾಹಿತ್ಯ ಸಂಘದ ನೂತನ ಅಧ್ಯಕ್ಷರಾಗಿ ಸಾಹಿತಿ, ಅಧ್ಯಾಪಕ ಡಾ.ಎಸ್ ಮಂಜುನಾಥ ಅವರು ಆಯ್ಕೆಯಾಗಿದ್ದಾರೆ.
ಸ್ಥಳೀಯ ರಾಘವ ಕಲಾ ಮಂದಿರದಲ್ಲಿ ಆಯೋಜನಗೊಂಡಿದ್ದ ಸಂಘದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಂಘದ ಅಧ್ಯಕ್ಷರಾಗಿದ್ದ ಡಾ. ಮಲ್ಲಿಕಾರ್ಜುನ ಗೌಡರು ಹಾಗು ರಮೇಶಗೌಡ ಪಾಟೀಲ್ ಅವರು ವಯೋ ಸಹಜ  ಸಮಸ್ಯಗಳಿಂದಾಗಿ  ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ನೂತನ  ಕಾರ್ಯಕಾರಿ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಹಿರಿಯರಾದ ಡಾ. ಹೆಚ್ ಮಲ್ಲಿಕಾರ್ಜುನ ಗೌಡರು, ಅದ್ಯಕ್ಷರಾಗಿ ಡಾ.ಎಸ್ ಮಂಜುನಾಥ್ , ಉಪಾಧ್ಯಕ್ಷರಾಗಿ ಕೆ ಪಂಪನ ಗೌಡರು ಕಾರ್ಯದರ್ಶಿ ಗಳಾಗಿ ಚಾಂದ್  ಪಾಷ , ಸಹ ಕಾರ್ಯದರ್ಶಿಯಾಗಿ ಶ್ರೀಮತಿ ವನಜಾಕ್ಷಿ ,ಖಜಾಂಚಿಯಾಗಿ ಶ್ರೀಮತಿ ಡಿ ನಾಗರತ್ನಮ್ಮ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಬಿ ಸಿದ್ಧಲಿಂಗಪ್ಪ, ಎ.ಎಂ.ಪಿ ವೀರೇಶಸ್ವಾಮಿ, ಅಚ್ಚಪ್ಪ ನಾಗರಾಜ, ರಮೇಶಗೌಡ ಪಾಟೀಲ್, ಶ್ರೀಮತಿ ಬಿ ಸುಮಾರೆಡ್ಡಿ, ಬಿ ರಮಣಪ್ಪ  ಆಯ್ಕೆಯಾಗಿದ್ದಾರೆ.
ಬಳಿಕ ಸಂಘದ ಕಾರ್ಯ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಕೆ.ಬಿ ಸಿದ್ಧಲಿಂಗಪ್ಪ ಅವರು ಸಂಘ ನಡೆದು ಬಂದ ಹಾದಿಯನ್ನು ವಿವರಿಸಿದರು . ಸಭೆಯಲ್ಲಿ ಸಂಘದ ಹಿರಿಯ ಸದಸ್ಯರಾದ ಶ್ರೀಮತಿ ಸುಶೀಲ ಶಿರೂರು, ಹಾವಿನಾಳು ಶರಣಬಸಪ್ಪ, ಸಿ ಚೆನ್ನಬಸವಣ್ಣ, ಡಾ.ಮಹಿಪಾಲ್, ಡಾ.ಅರವಿಂದ ಪಾಟೀಲ್, ಶ್ರೀಮತಿ ಕುಮುದಿನಿ,  ಶ್ರೀಮತಿ ಸರೋಜ ಬ್ಯಾತನಾಳ್,   ಡಾ.ಯೋಗಾನಂದರೆಡ್ಡಿ , ಬಿ.ಎಂ ಬಸವರಾಜ, ಶ್ರೀಮತಿ ನಾಗರತ್ನಮ್ಮ , ಶ್ರೀಮತಿ ಅಚ್ಚಪ್ಪ ಉಮಾ , ಪ್ರಭುದೇವ ಕಪ್ಪಗಲ್ಲು , ಕೆ ಮೃತ್ಯುಂಜಯ, ಕೆ.ಎಂ ಜಂಬುನಾಥ ಮತ್ತಿತರರು ಉಪಸ್ಥಿತರಿದ್ದು ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.
ನೂತನ ಕಾರ್ಯದರ್ಶಿಗಳಾದ ಚಾಂದ್ ಪಾಷ ಅವರು ವಂದಿಸಿದರು.
*****