ಮರಳಿ ಬನ್ನಿ ಬಳ್ಳಾರಿಗೆ…..
ಜನಿಸಿದರು ಹಳ್ಳಿಯ ಹೈದನಾಗಿ
ಗೊಲ್ಲ ಲಿಂಗಮ್ಮನಹಳ್ಳಿಯ ಕಂದನಾಗಿ
ಬೆಳೆದರು ಕೂಡು ಕುಟುಂಬದ ಸದಸ್ಯನಾಗಿ
ಶಿಸ್ತು ಸಂಯಮಗಳ ಸಾಕಾರ ರೂಪವಾಗಿ
ಅಂಗ ಸೌಷ್ಟವದ ಮೋಹನನಾಗಿ
ಕಲೆ ಸಾಹಿತ್ಯ ಸಂಗೀತಕ್ಕೆ ಸಮ್ಮೋಹಕನಾಗಿ
ಬಾಳಿದರು ಗೆಳೆಯರ ಸ್ನೇಹ ಸೇತುವಾಗಿ
ಬಡ ಕಲಾವಿದರ ಬಾಳಿನ ಬಂಧುವಾಗಿ..
ಸಂಘಟನೆ ಹೋರಾಟಗಳಲಿ ಸದಾ ಮುಂದು
ವೇದಿಕೆಯ ಭಾಷಣದಲ್ಲಿ ಮಾತಿನ ಸಿಡಿಗುಂಡು
ತಪ್ಪನು ಕಂಡರೆ ಸಿಡಿದೇಳುವ ಬೆಂಕಿಯ ಚೆಂಡು
ಮನಸು ಮಾತ್ರ ವಾತ್ಸಲ್ಯದಿ ಮಿಡಿಯುವ ಬಂಧು
ಧುರ್ಯೋಧನನ ಪಾತ್ರದಲ್ಲಿ ಗುಡುಗಿದರು
ಕರ್ಣನ ಪಾತ್ರದಿ ಕಣ್ಣೀರ ಧಾರೆ ಹರಿಸಿದರು
ವೇಮನ ರೆಡ್ಡಿ ಪಾತ್ರದ ಕನಸ ಕಂಡವರು
ಕನಸನು ನನಸು ಮಾಡದೆ ಹೊರಟು ಹೋದವರು.
ಅರ್ಥಶಾಸ್ತ್ರವನು ಸಮರ್ಥವಾಗಿ ಭೋಧಿಸಿದಿರಿ
ಪ್ರಾಂಶುಪಾಲರಾಗಿ ಕರ್ತವ್ಯದಲಿ ದಕ್ಷತೆ ಮೆರೆದಿರಿ
ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರು ನೀವಾದಿರಿ
ಕಾಲೇಜಿನ ಸುತ್ತೆಲ್ಲಾ ಗಿಡ ಬೆಳಸಿ ಪ್ರಕೃತಿ ಆರಾಧಕರಾದಿರಿ
ನಾಳೆನೇ ಬರಿತೀನೆಂದು ಹೇಳಿ ಹೋದಿರೇಕೆ ?
ವಾರವಾಯಿತು ಇನ್ನು ಬರದೇ ನಿಂತಿರೇಕೆ!
ಮರೆಯದೆ ಬಂದು ಬಿಡಿ ಸರ್ ಬಳ್ಳಾರಿಗೆ
ಕಾಯುತಿಹೆವು ನಾವು ನಿಮ್ಮ ಬರುವಿಕೆಗೆ..
-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.