ಅನುದಿನ ಕವನ-೯೨೮, ಹಿರಿಯ ಕವಿ: ಭೋಗೇಶ್‌ ಅವಜಿ, ಹಗರಿ ಬೊಮ್ಮನಹಳ್ಳಿ, ಕವನದ ಶೀರ್ಷಿಕೆ: ಬಾ…ಮಳೆಯೆ…ಓ….ಮಳೆಯೆ, ಚಿತ್ರ: ವರ್ಷಾ, ಬೆಂಗಳೂರು

ಬಾ…ಮಳೆಯೆ…ಓ….ಮಳೆಯೆ

ಬಾ ಮಳೆಯೆ॥ ಧರೆಗಿಳಿಯೆ ।।
ಓ ಮಳೆಯೆ । ಕೆಳಗಿಳಿಯೆ ।।

ಜಗವೆಲ್ಲ ಬದುಕಿದೆ  ।
ನಿನಗಾಗಿ ಕಾದಿದೆ    ।।
ನೀರಿಲ್ಲದೆ ನರಳುತಿದೆ ।
ಕೂಳಿಲ್ಲದೆ ಕೊರಗುತಿದೆ ।।

ಹಸಿವು ತೃಷೆಗಳ ಕಾಟ ।
ರೈತ ನಾಡಿಗೆ ಸಂಕಟ. ।।
ಅನ್ನ ನೀಡುವ ಪರಿಪಾಠ. ।
ನೀ…ನಿಲ್ಲದಕೆ ಭೀಕರ ಹೋರಾಟ ।।
ನೀ… ಬಾರದಕೆ ಬದುಕೆಲ್ಲ ಕತ್ತಲೆ ।
ಧರೆಯೆಲ್ಲ… ಬರಿ ಬೆತ್ತಲೆ….।।
ಭಯಾನಕ ಬಿಸಿಯುಸಿರು…।
ನಿರಾಶೆಯ ನಿಟ್ಟುಸಿರು ।।

ಓಡುವೆ ನೀ…ನಗುತ ಮುಗಿಲತ್ತ ।
ನೋಡುವೆವು ನಾ…ವ್‌ ಅಳುತ ನಿನ್ನತ್ತ ।।
ಆರ್ಭಟಿಸಿದರೆ ನೀನೊಮ್ಮೆ ಅಳುತ
ನೀ..ರ್ಕುಡಿದು ನಲಿವೆವು ನಾವ್‌ ಹರಸುತ।।

ಧರೆಯೆಲ್ಲ ಉರಿಯುತಿದೆ…।
ಬರಿ ಹೊಟ್ಟೆಯ ಕೆರೆ ಕುಂಟೆಗಳು
ಬಾಯ್‌…. ಬಿಡುತ ಬಳುಕುತಿವೆ ।
ಜೀ..ವ ರಾಶಿ ಹುಲ್ಲುಕಂಟಿಗಳು ।।

ಉಳುವ ರೈತನಿಗೆ ನಿನ್ನುಪಕಾರ. ।
ಬೆಳೆವ ಪೈರಿಗೆ ಸದಾ … ಹಿತಕರ।।
ಧರೆಯೆಲ್ಲ… ಬಹುರೂಪ ಶೃಂಗಾರ…।
ನೀ ಬಂದರೆ ಬಾಳೆಲ್ಲ … ಬಂಗಾರ।।

-ಭೋಗೇಶ್‌ ಅವಜಿ, ಹಗರಿ ಬೊಮ್ಮನಹಳ್ಳಿ
(ಚಿತ್ರ: ವರ್ಷಾ, ಬೆಂಗಳೂರು)
*****