ಕಣ್ಣ ಕಾಡಿನಲ್ಲಿ
ಊರಕಣ್ಣ ಕಾಡೊಳಗೆ
ನನ್ನದೂ ಒಂದು
ಗಿಡ
ನಡುಬಗ್ಗಿಸಿ ಎದೆಯುಬ್ಬಿಸಿ
ಏನೆಲ್ಲ ನೋಡಿದೆ
ಎಷ್ಟನ್ನು ಕಂಡೆ
ಹಂಡೆಯೊಳಗೆ ಕುದಿವ
ನೀರು
ಹೊಯ್ದಷ್ಟೂ ಹೊಗೆಯಾಡುವ
ಬಯಲು
ಆಲಯದಲ್ಲೀಗ ಆತಂಕ
ಮುಗಿಯುತ್ತ ಬಂತೇ
ಮೂರು ದಿನ
ಹಾರುವ ಹಗಲು?
ವಿಷಾದವೂ ನೆಮ್ಮದಿಯೂ
ಇದ್ದಂತಿಲ್ಲ
ಹೊರಗೆ ಪಟಪಟ ಮಳೆ
ಕಿವಿಯ ಕೆರೆಯಲ್ಲಿ
ತಳಮಳ
ಮುಚ್ಚುವವರೆಗೆ ತೆರೆದಿರಲಿ
ಕಣ್ಣು ಒಳಗೆ.
-ರಾಜು ಹೆಗಡೆ, ಶಿರಸಿ
—–