ಕ್ಷಮಿಸಿ ಸಾಹೇಬ್…
ನಾವೋ
ಪ್ರತಿಷ್ಟೆಗೆ ಬಿದ್ದು
ನಿಮ್ಮ ಕನಸುಗಳನ್ನು
ಮಾರುತ್ತಿದ್ದೇವೆ ಸಾಹೇಬ್…
ಎಷ್ಟೆಂದರೆ ಸಾಹೇಬ್
ಕೋಟಿಕೋಟಿಗೆ
ಒಂದು ಟಿಕೆಟಿಗೆ
ನಿಮ್ಮ ಕನಸುಗಳು
ಗಾಳಿಗೆ ತೂರಿ ನಿಂತಿದ್ದೇವೆ ಸಾಹೇಬ್…
ಯಾರ ಹುನ್ನಾರವನ್ನು
ಅರಿಯಲಾರದೆ
ಜಿದ್ದಿಗೆ ಬಿದ್ದು
ಒಬ್ಬರಿಗಿಂತ ಒಬ್ಬರು
ನಮ್ಮ ಕಾಲ ನಾವೇ ಎಳೆದುಕೊಂಡು
ಪೈಪೋಟಿಗೆ ಬಿದ್ದಿದ್ದೇವೆ ಸಾಹೇಬ್…
ನೀವು ತೋರಿದ ದಾರಿಯೊಂದನ್ನು ಬಿಟ್ಟು
ಎಲ್ಲ ದಾರಿಯಲ್ಲೂ ನಡೆಯುತ್ತಿದ್ದೇವೆ ಸಾಹೇಬ್
ನಮ್ಮ ಮನೆಯ ಬಿಟ್ಟು
ಅನ್ಯರ ಮನೆ ಮುಂದೆ ನಿಂತು
ಗೋಳಾಡಿ ಅತ್ತು ಗೋಗರೆದು
ಸಮಾನತೆಬೇಕೆಂದು ಬೇಡುತ್ತಿದ್ದೇವೆ ಸಾಹೇಬ್…
ನೀವೋ ನಮಗಾಗಿ
ಹಗಲಿರುಳು ದುಡಿದೀರಿ
ಎಲ್ಲವನ್ನು ದೊರಕಿಸಿಕೊಟ್ಟಿರಿ
ನಾವೋ ನಿಮ್ಮಿಂದ ಎಲ್ಲ ಪಡೆದು
ಏನು ಗೊತ್ತಿಲ್ಲದಂತೆ ನಟಿಸುತ್ತಿದ್ದೇವೆ….
-ಸಿದ್ದುಜನ್ನೂರ್, ಚಾಮರಾಜ ನಗರ
—–