ಸುಮ್ಮನೆ ನಿಂತು
ಎನ್ನೆದೆಯ ಮೇಲೆ ಕೈಯಿಟ್ಟಾಗ
ಅಂತರಾಳದ ಬಾಗಿಲು ತೆರೆಯಿತು
* * *
ಮಳೆ ನಿಂತ ಮೇಲೆ ಎಲೆಗಳ
ಮರೆಯಿಂದ ಹನಿ ಉದುರುವಾಗ
ನನ್ನ ಭೂತದ ನೆನಪು ಮರುಕಳಿಸಿತು
* * *
ಬೇಸಿಗೆ ಉರಿಬಿಸಿಲಲ್ಲಿ
ಕೋಗಿಲೆಯ ಕುಹೂ ಆಲಿಸಿ
ನೀರಡಿಸಿದ ಮನ ತಂಪಾಯಿತು
* * *
ಉದಯದಲಿ ಅರಳಿದ ಮೊಗ್ಗು
ಸಂಧ್ಯೆಯಲಿ ಮುದುಡಿದಾಗ
ನನ್ನೆದೆಯಲೇನೋ ತಳಮಳ
* * *
ಇಂದೇ ನಿರ್ಮಿಸಿದ ಚಂದದ ರಸ್ತೆಗೆ
ಸಂಜೆಯಲಿ ಕೆಂಪು ಕೆಂಪಿನ ಚಿತ್ತಾರ
-ಅರುಣಕುಮಾರ ಹಬ್ಬು, ಹುಬ್ಬಳ್ಳಿ