ಅನುದಿನ ಕವನ-೯೩೭, ಕವಿ:ಮರುಳಸಿದ್ದಪ್ಪ ದೊಡ್ಡಮನಿ ಹುಲಕೋಟಿ, ಕವನದ ಶೀರ್ಷಿಕೆ: ವರುಣನಿಗೆ…..🙏 ಮಳೆ ಚಿತ್ರ: ಎಂ.ಡಿ ರಫಿ, ಬಳ್ಳಾರಿ

ವರುಣನಿಗೆ…..🙏

ವರುಣ ಸಾಕು ನಿಲ್ಲಿಸು
ನಿನ್ನ ಆರ್ಭಟ ಮುಗಿಲು
ಹರಿದು ಧರೆಗೆ ಬರುತ್ತಿದೆ

ನೆಲವು ನೆರಳಿ ಅಳುತಿದೆ
ನಿನ್ನ ಕಾಟಕೆ ಮೆತ್ತಗಾಗಿ
ನೀರ ಜೊತೆ ಕಣ್ಣಿರು ಬರುತ್ತಿದೆ

ಊಳಿದ ನೆಲಕಿಟ್ಟ ಬೀಜ ಕೊಳೆತು ಮೇಲೆಳಲು ನೆರಳಿ
ಒಡಲಲ್ಲೆ ಸಾಯುತಿದೆ

ಅನ್ನ ಬೇಳೆವ ಒಕ್ಕಲಿಗ
ಒಕ್ಕಲೆದ್ದು ಹೋಗುತ್ತಿದ್ದಾನೆ
ಅವನ ಆಸೆಗಳು ಕಮರುತ್ತಿದೆ

ಕೆರೆ ಹಳ್ಳ ಕೊಳ್ಳದೊಡಲು ತುಂಬಿ ತುಳುಕಿ ಹೋಗಿದೆ
ರುದ್ರ ನರ್ತನಕೆ ಸಾಕಾಗಿದೆ

ನಿನ್ನಾರ್ಭಟವು ಅಳಿದು
ನಮ್ಮ ನೆರಳಾಟಕೆ ನೀನು
ಸಂಜೀವಿನಿ ಆಗಬೇಕಿದೆ.


-ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ
*****