ಅನುದಿನ‌ ಕವನ-೯೬೦, ಕವಿ:ಈರಣ್ಣ ಬೆಂಗಾಲಿ, ರಾಯಚೂರು, ಕವನದ ಶೀರ್ಷಿಕೆ: ವೀರ ಯೋಧರು

ವೀರ ಯೋಧರು

ದೇಶದ ಹಿತಕ್ಕಾಗಿ, ಸದೃಢತೆಗಾಗಿ
ಹಗಲಿರುಳು ದುಡಿಯುವರು ಸೈನಿಕರು,
ವರ್ಷಾನುಗಟ್ಟಲೆ ತಮ್ಮವರನು ಬಿಟ್ಟು
ಗಡಿಕಾಯುವರು ವೀರ ಯೋಧರು

ದೇಶ ಸ್ಪೋಟಿಸುವವರ ಉಸಿರ ನಿಲ್ಲಿಸಲು
ತಮ್ಮ ಪ್ರಾಣವನ್ನೇ ಲೆಕ್ಕಿಸರು
ಶತ್ರುಗಳ ಎದೆಗೆ ಗುಂಡಿಡುವ
ಅವರ ಪರಾಕ್ರಮದ ಗುಂಡಿಗೆಯನು
ಎಷ್ಟು ಬಣ್ಣಿಸಿದರೂ ಸಾಲದು

ಯೋಧರ ಕೆಚ್ಚೆದೆಯ ಧೈರ್ಯ, ಶೌರ್ಯವನು
ಪ್ರತಿಯೊಬ್ಬರು ಮೆಚ್ಚುವಂತಹುದು
ತಾಯಿನಾಡಿಗಾಗಿ ಹೊಡೆದಾಡುವ
ಸೈನಿಕರೆ ನಿಜವಾದ ಹಿರೋಗಳು

ಸೈನಿಕರಿಂದ ಗಡಿಯಲ್ಲಿ ಅವಿರತ ಕಾವಲು
ಶಾಂತಿಯ ಸುಪ್ಪತ್ತಿಗೆಯಲ್ಲಿ ದೇಶವಾಸಿಗಳು
ವೈರಿಗಳ ಸೆದೆಬಡಿಯುವ ಕಾಳಗಗಳಲ್ಲಿ
ಯೋಧರು ಹರಿಸಿರುವರು ತಮ್ಮ ರಕ್ತವನ್ನು,
ಅಪ್ಪಿದ್ದಾರೆ ವೀರ ಮರಣವನು

ನಾವೆಂದು ಮರೆಯೋ ಹಾಗಿಲ್ಲ ಸೈನಿಕರ ದೇಶಸೇವೆ
ಸ್ಮರಿಸಲೇ ಬೇಕು ಅವರನು ಪ್ರತಿದಿನ, ಪ್ರತಿಕ್ಷಣ…
ಹುತಾತ್ಮ ಯೋಧರು
ಅಮರ್ ರಹೇ, ಅಮರ್ ರಹೇ.. ಎನ್ನೋಣ

ಬೊಲೋ ಭಾರತ್ ಮಾತಾ ಕೀ – ಜೈ


-ಈರಣ್ಣ ಬೆಂಗಾಲಿ, ರಾಯಚೂರು
——