ಕೊಡೆಗಳು (ಶಿಶುಗೀತೆ)
ಬರುತಿದೆ ಇಳೆಗೆ ಮಳೆ..
ಬಣ್ಣ ಬಣ್ಣದ ಛತ್ರಿಗಳೆ
ಎಲ್ಲೆಡೆ ಈಗ ಅರಳಿವೆ..
ಮುದುಡಿ ಮಲಗಿದ್ದ ಕೊಡೆಗಳಿಗೆ
ಬಂದಿದೆ ಈಗ ಭಾರಿ ಬೆಲೆ
ಎಲ್ಲೆಡೆ ಈಗ ಮೆರೆದಿವೆ…
ಕೆಂಪು, ಹಳದಿ , ನೀಲಿ
ಹಸಿರು, ಕಪ್ಪು ಜೊತೆಯಲಿ..
ಇನ್ನೂ ಹಲವು ವರ್ಣಗಳಲಿ…
ರಸ್ತೆಯ ತುಂಬಾ ಕಂಗೊಳಿಸಿವೆ…
ಮಳೆಯಲಿ ಮಿಂದು ಸಾಗಿವೆ..
ಹಿಡಿದವರನು ರಕ್ಷಿಸಿವೆ…
ನಿನ್ನ ಹಿಡಿದವರು ಮಳೆಗೆ ನೆನೆಯರು…
ಬಿಸಿಲು ,ಮಳೆಗಷ್ಟೆ ನಿನ್ನ ನೆನೆಯುವರು…
ಮೂಲೆಯಲಿ ಮತ್ತೆ ಮುದುಡಿಡುವರು.
-ವೀಣಾ ಶ್ರೀನಿವಾಸ್, ಮಧುಗಿರಿ
—–