ಐದು ‘ಹನಿ’ಗಳು….!
೧. ಅದಮ್ಯ ಪ್ರೀತಿ
ಪತಿ – ಪತ್ನಿ
– ಯರೀರ್ವರಲ್ಲಿ
ಇರಬೇಕು
ಅದಮ್ಯ ಪ್ರೀತಿ ;
ಪ್ರೀತಿ ಇಲ್ಲದಿರೆ
ಬದುಕು ದಿನವೂ
ಯುದ್ಧದ ರೀತಿ.
೨.ನನ್ನ ಅಹವಾಲು
ಬೇಕಿಲ್ಲ ಮಹಲು
ಸುಖ ಪಡಲು
ನಿನ್ನ ಪ್ರೀತಿಯ
ಹೊನಲು
ಸದಾ ಹೀಗೇ ಇರಲೆಂಬುದೇ
ನನ್ನ ಅಹವಾಲು.
೩.ನೀನಿರಲು
ನೀ ಬಳಿಯಿದ್ದಾಗ
ಒಂದೂ ಮಾತನಾಡದಿದ್ದರೂ
ಮನ
ಸಂತಸದ ಕಡಲು ;
ನೀ ದೂರಾದರೆ
ಸಾಕು
ಬರೀ ಆತಂಕ ದಿಗಿಲು.
೪. ಗೊತ್ತಿಲ್ಲವೆ…..
ನೀ ಕರೆದಾಗ
ಬರಲಿಲ್ಲವೆಂದು
ದೂರುವಿಯಲ್ಲಾ! ;
ನಿನ್ನ ಹೃದಯದಲ್ಲೇ
ನಾ ಅವಿತಿರುವುದು
ಗೊತ್ತಿಲ್ಲವೆ ನಲ್ಲಾ?.
೫. ನಾ…..
ನೀ ಬಳಿ ಇರದ
ಈ ಕ್ಷಣ
ನೀರಿಲ್ಲದ
ಮೀನಿನಂತೆ ;
ನೀ ಬಳಿ ಬಂದ
ತಕ್ಷಣ
ಗರಿಬಿಚ್ಚಿದ
ನವಿಲಿನಂತೆ.
-ಶೋಭಾ ಮಲ್ಕಿ ಒಡೆಯರ್, ಹೂವಿನ ಹಡಗಲಿ