ಶಿಕ್ಷಕರಲ್ಲೂ ಶ್ರೇಣೀಕೃತ ವ್ಯವಸ್ಥೆಯಿದೆ ಎಂದರೆ ನಂಬುವಿರಾ!?

ಪ್ರಾಥಮಿಕ ಶಾಲೆ ಶಿಕ್ಷಕಕರು
ಪ್ರೌಢ ಶಾಲಾ ಶಿಕ್ಷಕಕರು
ಪದವಿ ಪೂರ್ವ ಕಾಲೇಜಿನ ಶಿಕ್ಷಕರು
ಪದವಿ ಕಾಲೇಜಿನ ಶಿಕ್ಷಕರು
ವಿಶ್ವ ವಿದ್ಯಾಲಯದ ಶಿಕ್ಷಕರು

ಇವರಲ್ಲಿ ಬಹುತೇಕ ಜನ ಶಿಕ್ಷಕರು ತಮಗಿಂತ ಕೆಳಗಿನ ಹಂತದ ಶಿಕ್ಷಕರನ್ನು ಗೌರವಿಸುವುದಿಲ್ಲ, ತಮಗಿಂತಲೂ ಬುದ್ಧಿವಂತಿಕೆಯಲ್ಲಿ ಕಡಿಮೆ ಎಂದೇ ಭಾವಿಸುತ್ತಾರೆ. ಹೀಗಾಗಿ ಮೇಲಿನ ಹಂತದಲ್ಲಿರುವವರೆಲ್ಲರೂ ಕೆಳಗಿನ ಹಂತದ ಶಿಕ್ಷಕರನ್ನು ಕಂಡರೆ ಮುಖ ಸಿಂಡರಿಸುವುದೇ ಹೆಚ್ಚು.

ವಿಶೇಷವೇನೆಂದರೆ ಇವರೆಲ್ಲ ಆ ಹಂತಗಳಿಗೆ ಹೋಗಲು ತಮ್ಮನ್ನು ಬಾಲ್ಯದಲ್ಲಿಯೇ ಕೈಹಿಡಿದು ತಿದ್ದಿ ತೀಡಿಸಿ ಅಕ್ಷರ ಕಲಿಸಿದವರೇ ಪ್ರಾಥಮಿಕ ಶಾಲಾ ಹಂತದ ಶಿಕ್ಷಕರೆಂಬುದನ್ನೇ ಮರೆತುಬಿಟ್ಟಿರುತ್ತಾರೆ. ಗುರಿ ತಲುಪಿದ ಮೇಲೆ ಏಣಿಯನ್ನು ಒದ್ದ ಹಾಗೇ. ಇದೇ ದೊಡ್ದ ದುರಂತ.

-ಸಿದ್ಧರಾಮ ಕೂಡ್ಲಿಗಿ