ಅನುದಿನ ಕವನ-೯೭೯, ಕವಿಯಿತ್ರಿ: ಡಾ. ಸುಮ‌ ವೈ, ಬಳ್ಳಾರಿ, ಕವನದ ಶೀರ್ಷಿಕೆ: ನಾನು ಕಾರ್ಮಿಕಳಲ್ಲ

ನಾನು ಕಾರ್ಮಿಕಳಲ್ಲ

ಪ್ರತಿ ದಿನ ಸೂರ್ಯೋದಯಕೆ ಮೊದಲೇ ಆರಂಭವಾಗುವದು ನನ್ನ ದಿನ
ಪ್ರತಿನಿತ್ಯವೂ ಉಳಿದವರು ಏಳುವುದು ಆಮೇಲೇನಾ
ಪ್ರತಿ ಕೆಲಸವೂ ಆಗಬೇಕು ಬಹುಬೇಗ
ಪ್ರತಿ ಕೆಲಸ ನಂತರ ಮತ್ತೊಂದು ಕೆಲಸದ ಉದ್ವೇಗ
ಪ್ರತಿ ಕೃತಿಗೂ ಹೀಯಾಳಿಕೆಯ ಮಾತು
ಪ್ರತಿಬಾರಿಗೂ ಇದೇ ಆತು
ಪ್ರತಿಬಾರಿಗೂ ಇತರರು ಅನುಕಂಪ ತೋರಿಸುವಷ್ಟು ನನಗೆ ವಯಸ್ಸಾಗಿಲ್ಲ
ಪ್ರತಿ ಕಾರ್ಯದ ಜವಾಬ್ದಾರಿ ನನಗೇ ಬೀಳುವುದಲ್ಲ
ಪ್ರತಿ ಕೆಲಸಕ್ಕೂ ನನಗೆ ಸಿಗುವುದಿಲ್ಲ ವೇತನ
ಪ್ರತಿಮನೆಯ ಗೃಹಿಣಿಯದೂ ಇದೇ ಜೀವನ
ಪ್ರತಿದಿನ ನಡುರಾತ್ರಿಯವರೆಗಿನ ಕಾರ್ಮಿಕಳು ನಾನು
ಪ್ರತಿಭಟಿಸದೇ ನಡುರಾತ್ರಿ ಕವಿತೆ ಬರೆಯುವ ಕಾಯಕವಲ್ಲದೇ ಇನ್ನೇನು

-ಡಾ. ಸುಮ ವೈ, ಬಳ್ಳಾರಿ