ವಿದ್ಯಾರ್ಥಿಗಳ ಆಸಕ್ತಿಯೇ ಸಾಧನೆಗೆ ಹಾದಿ -ಅಂತಾರಾಷ್ಟ್ರೀಯ ಅಭಿಪ್ರೇರಕ ಆರ್ ಎ ಚೇತನ್ ರಾಮ್

ಬಳ್ಳಾರಿ, ಸೆ.11: ಒಂದು ದೀಪದಿಂದ ನೂರು ದೀಪ ಬೆಳಗಬಹುದು  ಎಂದು ಅಂತಾರಾಷ್ಟ್ರೀಯ ಅಭಿಪ್ರೇರಕ ಆರ್ ಎ ಚೇತನ್ ರಾಮ್ ಅವರು ಹೇಳಿದರು.
ನಗರದ  ಬಸವ ಭವನದಲ್ಲಿ ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನವರು ಆಯೋಜಿಸಿದ್ದ ‘ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಶಿಕ್ಷಕ ಎನ್ನುವ ಜ್ಯೋತಿಯಿಂದ ಜಗವನ್ನು ಬೆಳಗಬಹುದು .ಮನದ ಕತ್ತಲೆಯನ್ನೋಡಿಸುವ ಶಕ್ತಿ ಇರುವುದೆ  ಶಿಕ್ಷಕನಿಗೆ ಅಂತೆಯೇ ಆತನನ್ನು ಬ್ರಹ್ಮ ವಿಷ್ಣು ಮಹೇಶ್ವರ ಎಂದು ಕರೆದರು ವಿದ್ಯಾರ್ಥಿಗಳ ಆಸಕ್ತಿಯೇ ಸಾಧನೆಗೆ ಹಾದಿಯಾಗುತ್ತದೆ ಎಂದರು.
ಕಾರ್ಯಕ್ರಮದ  ಮುಖ್ಯ ಅತಿಥಿ ಡಿಸಿಎಫ್ ಟಿ.ಹೀರಾಲಾಲ್  ಅವರು ಮಾತನಾಡಿ, ಶಿಸ್ತು ,ಸಂಯಮ, ಗುರಿ, ಪರಿಶ್ರಮ,  ಹಾಗು ವಿನಯತೆ ವಿದ್ಯಾರ್ಥಿಗಳ ಬದುಕಿನ ಪಂಚ ಸೂತ್ರಗಳು. ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ವಿದ್ಯಾರ್ಥಿಗಳ ಬದುಕು ಬಂಗಾರವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಿಸಿದ ವೀ.ವಿ ಸಂಘದ ಅದ್ಯಕ್ಷ ಆರ್ ರಾಮನಗೌಡ, ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅದ್ಯಕ್ಷತೆವಹಿಸಿದ್ದ ಏಳುಬೆಂಚಿ ರಾಜಶೇಖರವರು ವಿದ್ಯಾರ್ಥಿಗಳ ಸಾಧನೆಯನ್ನು ಹಾಗು ಈ ಹಿಂದೆ ಸೇವೆಸಲ್ಲಿಸಿದ ಉಪನ್ಯಾಸಕರ ಸೇವೆಯನ್ನು ಸ್ಮರಿಸಿದರು.
ಮುಖ್ಯ ಅತಿಥಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಗುರುಸಿದ್ಧಸ್ವಾಮಿ ಮಾತನಾಡಿ, ವೀ.ವಿ ಸಂಘದ ಸ್ಥಾಪಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವೀ.ವಿ ಸಂಘದ ಕೋಶಾಧಿಕಾರಿ ಗೋನಾಳ್ ರಾಜಶೇಖರಗೌಡ. ಕಾರ್ಯಕಾರಿ ಸಮಿತಿ ಸದಸ್ಯರಾದ ಮಹೇಶ್ವರ ಸ್ವಾಮಿ, ಟಿ ವಿರುಪಾಕ್ಷಗೌಡರು, ಕೋರಿ ವಿರುಪಾಕ್ಷಪ್ಪ,  ಮಲ್ಲನಗೌಡ, ಬೈಲುವದ್ದಿಗೇರಿ ಎರ್ರಿಸ್ವಾಮಿ, ಶ್ರೀಮತಿ ಕುಪ್ಪಗಲ್ ಗಿರಿಜಾ, ಶ್ರೀಮತಿ ಕಾತ್ಯಾಯಿನಿ ಮರಿದೇವಯ್ಯ, ಕೆರನಳ್ಳಿ ಚಂದ್ರಶೇಖರ, ಅಸುಂಡಿ ಬಿ.ನಾಗರಾಜ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ದೊಡ್ಡ ಬಸವ ಗವಾಯಿಗಳು ಹಾಗು ಕಾಲೇಜಿನ ವಿದ್ಯಾರ್ಥಿನಿಯರು ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಅಣ್ಣಾ ವಿರುಪಾಕ್ಷಪ್ಪ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಕೆ.ಎಂ ದೇವೇಂದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಸದಸ್ಯ ಕೆ ಮುದ್ಧನಗೌಡ ವಂದಿಸಿದರು.
ಪಿಯುಸಿ ದ್ವಿತೀಯ ವಾರ್ಷಿಕ  ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪದಕ ಹಾಗು ಪ್ರಶಸ್ತಿ ಪತ್ರನೀಡಿ ಗೌರವಿಸಲಾಯಿತು. ನಂತರ ಗಣ್ಯರಿಗೆ ಆಡಳಿತ ಮಂಡಳಿಯವರು ಸನ್ಮಾನಿಸಿದರು. ಕಾರ್ಯಕ್ರಮದ ನಂತರ ಪ್ರಥಮ ಪಿಯಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಗುರುವಂದನಾ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂಧಿಯವರು ವಿದ್ಯಾರ್ಥಿಗಳು ಹಾಗು ಸಾವಿರಾರು ಸಂಖ್ಯೆಯಲ್ಲಿ ಪಾಲಕ ಪೋಷಕರು  ಅತ್ಯಂತ ಉತ್ಸಾಹದಿಂದ ಪಾಲ್ಗೊಂಡ ಕಾರ್ಯಕ್ರಮ ಯಶಸ್ವಿಗೊಳಿಸಿದರು.
*****