ಬೆಂಗಳೂರು ವಿವಿಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಬೆಂಗಳೂರು, ಸೆ.15:ಬೆಂಗಳೂರು ವಿವಿಯಲ್ಲಿ  ಶುಕ್ರವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಯಿತು.                                              ವಿವಿಯ ಜ್ಞಾನಭಾರತಿ ಆವರಣದ ಆಡಳಿತ ಕಛೇರಿ ಮುಂಭಾಗದಲ್ಲಿ  ಕುಲಪತಿ ಪ್ರೊ. ಡಾ. ಜಯಕರ್ ಎಸ್.ಎಂ ಅವರು ವಿಶ್ವವಿದ್ಯಾಲಯದ ಶಿಕ್ಷಕರು-ಶಿಕ್ಷಕೇತರ ನೌಕರರು ಹಾಗೂ ವಿದ್ಯಾರ್ಥಿಗಳಿಗೆ “ಸಂವಿಧಾನ ಪೀಠಿಕೆ” ಬೋಧಿಸಿದರು.                                                        ಈ ಸಂದರ್ಭದಲ್ಲಿ ಕುಲಸಚಿವ ಶೇಕ್ ಲತೀಫ್, ಕುಲಸಚಿವ (ಮೌಲ್ಯಮಾಪನ) ಪ್ರೊ.ಸಿ. ಶ್ರೀನಿವಾಸ್, ವಿಶೇಷಾಧಿಕಾರಿ ಪ್ರೊ. ಪಿ.ಸಿ.ನಾಗೇಶ್, ಗ್ರಂಥಾಪಾಲಕ ಡಾ. ಬಿ.ಆರ್. ರಾಧಾಕೃಷ್ಣ, ಪ್ರಾಧ್ಯಾಪಕರುಗಳಾದ ಪ್ರೊ. ಟಿ.ಎಚ್. ಮೂರ್ತಿ, ಪ್ರೊ. ಸಿ.ಬಿ.ಹೊನ್ನು ಸಿದ್ಧಾರ್ಥ, ಪ್ರೊ. ಜಯರಾಮ್ ನಾಯ್ಕ್, ಡಾ. ಸಿ.ಡಿ.ವೆಂಕಟೇಶ್, ಪ್ರೊ.ನಾಗರತ್ನಮ್ಮ, ಡಾ.ಕೆ. ರಾಮಕೃಷ್ಣಯ್ಯ, ಪ್ರೊ. ಮುರಳೀಧರ್, ಪ್ರೊ.ಹನುಮಂತಪ್ಪ, ಡಾ. ಪ್ರಭಾಕರ್ ಹಾಗೂ ಶಿಕ್ಷಕ-ಶಿಕ್ಷಕೇತರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.