ಬಳ್ಳಾರಿಯ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿಯಿಂದ ‘ಸೂರ್ಯಪ್ರಭ ವಾಹನದ ಮೇಲೆ ಗಣೇಶ’ ಪ್ರತಿಷ್ಠಾಪನೆ -ಮಂಡಳಿ ಅಧ್ಯಕ್ಷ ಜಿ.ಆರ್.ಆರ್ ಸುನೀಲ್

ಬಳ್ಳಾರಿ, ಸೆ.16: ನಗರದ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿ ಪ್ರತಿವರ್ಷದಂತೆ ಪ್ರಸಕ್ತ ವರ್ಷವೂ ಡಾ.ರಾಜಕುಮಾರ್ ರಸ್ತೆ (ಅನಂತಪುರ ರಸ್ತೆ)ಯ ಎಂ.ಜಿ.ಎದುರುಗಡೆ ಸಂಭ್ರಮ, ಸಡಗರದಿಂದ ಗಣೇಶೋತ್ಸವ ಆಚರಿಸಲು ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದೆ ಎಂದು ಮಂಡಳಿ ಅಧ್ಯಕ್ಷ .ಆರ್.ಆರ್ ಸುನೀಲ್ ಅವರು ಹೇಳಿದರು.                            ಅವರು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ೨೪ ವರ್ಷಗಳಿಂದ ನಮ್ಮ ಮಿತ್ರ ಮಂಡಳಿ ಪ್ರತಿ ವರ್ಷವೂ ಗಣೇಶೋತ್ಸವ ಆಚರಣೆಯನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಲ್ಲದೇ ಒಂದೊಂದು ವರ್ಷ ಒಂದೊಂದು ವಿಶೇಷತೆಯ ಗಣೇಶನನ್ನು ಪ್ರತಿಷ್ಠಾಪನೆ ಮಾಡಿಕೊಂಡು ಬಂದಿದ್ದೇವೆ. ಕಳೆದ ವರ್ಷ ಆದಿಯೋಗಿಯ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದೇವು.ಈ ವರ್ಷ ನವಗ್ರಹ ಸಮೇತ ಸೂರ್ಯಪ್ರಭ ವಾಹನದ ಮೇಲೆ ಗಣೇಶ ಇರುವಂತಹ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತೀದ್ದೇವೆ ಎಂದು ತಿಳಿಸಿದರು.
ಸೂರ್ಯಪ್ರಭ ವಾಹನವು ತುಂಬಾ ಶಕ್ತಿದಾಯಕವಾಗಿದ್ದು ಸೂರ್ಯಪ್ರಭ ವಾಹನದಲ್ಲಿ ನಮ್ಮ ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ನಗರದ ಜನತೆಗೆ ವಿಶೇಷ ಗಣಪ ದರ್ಶನ ನೀಡಲು ಸಜ್ಜಾಗಿದ್ದಾನೆ. ನವಗ್ರಹ ಸಮೇತ ಗಣೇಶ ನಮ್ಮನ್ನೆಲ್ಲಾ ಹರಸಲಿದ್ದಾನೆ ಎಂದರು.
ಪ್ರತಿವರ್ಷದಂತೆ ಈ ಬಾರಿಯೂ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಗಣೇಶನ ದರ್ಶನಕ್ಕೆ ನಗರದ ಗಣ್ಯರು ಆಗಮಿಸಲಿದ್ದಾರೆ. ಬರುವ ಭಕ್ತರಿಗೆ ಸಮಸ್ಯೆ ಆಗದಂತೆ ಸರತಿ ಸಾಲಿನಲ್ಲಿ‌ ಬಂದು ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದೆ.ನಮ್ಮ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿ ಸದಸ್ಯರು ಹಾಗೂ ಸ್ವಯಂ ಸೇವಕರು ಭಕ್ತರ ಸೇವೆಗೆ ಸಜ್ಜಾಗಿದ್ದಾರೆ ಎಂದು ಹೇಳಿದರು.
ಪ್ರತಿವರ್ಷ ವಿಶಿಷ್ಟತೆಯ ಗಣೇಶನನ್ನು ಪ್ರತಿಷ್ಠಾಪನೆ ಮಾಡುವಲ್ಲಿ ನಮ್ಮ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿ ಹೆಸರುವಾಸಿಯಾಗಿದೆ. ಈ ವರ್ಷ ಕೂಡಾ ಜನರ ಮನಗೆಲ್ಲಲು ಪ್ರಯತ್ನಿಸಿದ್ದೇವೆ ಎಂದು ಸುನೀಲ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸುನಿಲ್ ಕುಮಾರ್, ಪಾಲಿಕೆ ಸದಸ್ಯ ನಂದೀಶ್, ನೇಕಾರ್ ನಾಗರಾಜ್, ಸುಬ್ಬಾರಾವ್ , ರಾಘವ್, ಲಕ್ಷ್ಮಣ, ಆದೀಶೇಷ, ಎಂಆರ್ ಕೆ ರಾಜೇಶ್, ವಂಡ್ರೀ, ಮಾಜಿ ಬೂಡಾ ಅಧ್ಯಕ್ಷ ಮಾರುತಿ ಪ್ರಸಾದ್, ಬಿಲ್ವಾ ರಾಜೇಶ್, ಡಾ.ರವಿ, ಮಧುಸೂಧನ ರೆಡ್ಡಿ, ರವಿ ರೆಡ್ಡಿ, ವೇಣುಗೋಪಾಲ ಗುಪ್ತಾ, ತಲ್ಲಂ ಕಿಶೋರ್, ರಾಖಿ, ದೀಪಕ್ ಹಾಗೂ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿ ಸದಸ್ಯರು ಇದ್ದರು.
—–