ವಣೇನೂರು: ನಾಲ್ವರು ಶಿಕ್ಷಕರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ: ಶಾಲಾಭಿವೃದ್ಧಿಗೆ 28ಸಾವಿರ ರೂ. ದೇಣಿಗೆ

ಬಳ್ಳಾರಿ, ಸೆ.17: ತಾಲೂಕಿನ ವಣೇನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತು-ಹದಿನೈದು ವರ್ಷಗಳಿಂದ ಕರ್ತವ್ಯನಿರ್ವಹಿಸುತ್ತಿದ್ದ ನಾಲ್ವರು ಸಹ ಶಿಕ್ಷಕರಾದ ಶ್ರೀನಿವಾಸ್ ಪ್ರಸಾದ್, ಪ್ರವೀಣ್ ಕುಮಾರ್,
ಶ್ರೀಮತಿ ಗೀತಾ, ಶ್ರೀಮತಿ ಸೌಮ್ಯ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.
ವರ್ಗಾವಣೆಗೊಂಡ ನಾಲ್ವರು ಶಿಕ್ಷಕರು ಶಾಲಾಭಿವೃದ್ಧಿಗೆ 28ಸಾವಿರ ರೂ. ದೇಣಿಗೆ ನೀಡಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಸಹ ಶಿಕ್ಷಕ ಶ್ರೀನಿವಾಸ ಅವರು, ಯಾರು ನಮ್ಮಿಂದ ಕಸಿದುಕೊಳ್ಳಲಾಗದ ವಸ್ತು ಎಂದರೆ ಅದು ಶಿಕ್ಷಣ. ಈ ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಗ್ರಾಮಸ್ಥರು, ಪೋಷಕರು, ಹಳೆಯ ವಿದ್ಯಾರ್ಥಿಗಳು ಗ್ರಾಮದ ಜತೆ ಸರಕಾರಿ ಶಾಲೆಗಳ ಅಭಿವೃದ್ಧಿಗೂ ಗಮನ ನೀಡಬೇಕು ಎಂದರು.


ಸರ್ಕಾರ ವರ್ಷಕ್ಕೆ ನೀಡುವ ಅನುದಾನದಲ್ಲಿ ಶಾಲೆಗಳ ಅಭಿವೃದ್ಧಿ ಕಷ್ಟಸಾಧ್ಯ. ಸಾರ್ವಜನಿಕರು ತನು ಮನ ಧನ ದಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
‘ನನ್ನ ಶಾಲೆ ನನ್ನ ಹೆಮ್ಮೆ’: ಸರ್ಕಾರಿ ಶಾಲೆ ಅಭಿವೃದ್ಧಿ ಆಗಬೇಕು ಎಂಬ ಕಾಳಜಿ ಇರುವ ಸುಮಾರು 16 ವರ್ಷ ಶಾಲೆಗೆ ಕರ್ತವ್ಯ ವಹಿಸಿದ್ದ ಸವಿನೆನಪಿಗೆ ಶಾಲಾ ಪ್ರಗತಿಗಾಗಿ ವರ್ಗಾವಣೆಗೊಂಡ ಸಹ ಶಿಕ್ಷಕರು ಮುಖ್ಯಗುರುಗಳಿಗೆ 28000ರೂಪಾಯಿಗಳು ಚೆಕ್ ವಿತರಿಸಿದರು. ಹಳೆ ವಿದ್ಯಾರ್ಥಿಗಳು ಅನ್ನದಾಸೋಹ ಸೇವೆ ಸಲ್ಲಿಸಿದರು.
*****