ಬಳ್ಳಾರಿ, ಸೆ.25: ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ 23ನೇ ವಾರ್ಷಿಕ ಮಹಾಸಭೆ, ವಾರ್ಷಿಕೋತ್ಸವದಲ್ಲಿ ಇಸಿಓ ಗೂಳಪ್ಪ ಸೇರಿದಂತೆ ಹಲವು ಸಾಧಕರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಪಂಪನಗೌಡ, ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಡಾ. ಎಂಟಿ ಮಲ್ಲೇಶಪ್ಪ, ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ನೈಮುೂರ್ ರೆಹಮಾನ್, ಕ್ಷೇತ್ರ ಸಮನ್ವಯ ಅಧಿಕಾರಿ ಅಡ್ಡಾರು ಮಲ್ಲಪ್ಪ, ಬಳ್ಳಾರಿ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾಜಿ ರಾವ್, ಪ್ರಧಾನ ಕಾರ್ಯದರ್ಶಿ ಜೆ.ಕೆ ರಾಮಕೃಷ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎನ್ ರಮೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಿರಿಮಲ್ಲಪ್ಪ, ಮುಖ್ಯಗುರುಗಳ ಸಂಘದ ಅಧ್ಯಕ್ಷ ಶಿವನಾಯಕ್, ನರಸಿಂಹಮೂರ್ತಿ, ಜಿಪಿಟಿ ಸಂಘದ ದಮ್ಮೂರ್ ವೀರೇಶ್, ಎಕೆ ಮಲ್ಲಿ, ಹೊನ್ನೂರ್ ಸ್ವಾಮಿ, ಮೃತ್ಯುಂಜಯ ಸ್ವಾಮಿ, ದಯಾನಂದ ಸ್ವಾಮಿ, ಓಂಕಾರ ರೆಡ್ಡಿ, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ನೀಲಕಂಠಗೌಡ, ನಿವೃತ್ತ ಮುಖ್ಯ ಗುರು ಮೆಹತಾಬ್, ಎನ್‌ಪಿಎಸ್ ಅಧ್ಯಕ್ಷ ತಿಪ್ಪಾರೆಡ್ಡಿ ನಂದೀಶ, ನಿರ್ದೇಶಕ ಮಂಡಳಿಯ ಶ್ರೀಮತಿ ಜಯಶ್ರೀ, ಬಸವರಾಜೇಶ್ವರಿ, ಸಕ್ಲಿನ್ ಬಸವರಾಜ್, ಬೈಲೂರು ಹನುಮಂತಪ್ಪ, ಮಹಾಂತೇಶ, ರಾಮಚಂದ್ರಪ್ಪ, ಜಯಲಕ್ಷ್ಮಿ ಮತ್ತಿತರರು ಇದ್ದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಬಹುಮಾನಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಬಸವರಾಜ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಂಜುನಾಥ ನಾಟೇಕರ್ ಮಾತನಾಡಿದರು.ಸಿಆರ್ ಪಿ ಕೆಂಚಪ್ಪ ಅವರು ನಿರ್ವಹಿಸಿದರು.
—–