ಶಿಕ್ಷಕ ಸೋತರೆ ದೇಶವೂ ಸೋಲುತ್ತದೆ -ಚೋರುನೂರು ಕೊಟ್ರಪ್ಪ

ಬಳ್ಳಾರಿ, ಸೆ.30: ನಗರದ ವೀರಶೈವ ವಿದ್ಯಾವರ್ಧಕ ಸಂಘವು ಶಿಕ್ಷಕರ ದಿನಾಚರಣೆಯ ನಿಮಿತ್ತ ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ ಸಮಾರಂಭವನ್ನು  ಸ್ಥಳೀಯ ಎ.ಎಸ್ ಎಂ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿತ್ತು.  ಸಮಾರಂಭದ ವಿಶೇಷ ಉಪನ್ಯಾಸಕರಾಗಿ ‌ಆಗಮಿಸಿದ್ದ ಸಂಘದ ಮಾಜಿ ಕಾರ್ಯದರ್ಶಿಗಳು ಹಾಗು ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ  ಚೋರನೂರು ಕೊಟ್ರಪ್ಪ ಮಾತನಾಡಿ, ಶಿಕ್ಷಕ ದೇಶದ ರಕ್ಷಕ ಆತ ಸೋತರೆ ದೇಶವೇ ಸೋಲುತ್ತದೆ ಹಾಗಾಗಿ ಈ ದೇಶದಲ್ಲಿ ಮೊದಲ ಪ್ರಾಶಸ್ತ್ಯ ಶಿಕ್ಷಕನಿಗೆ ಸಿಗಬೇಕು ಎಂದರು ಈ ದಿಶೆಯಲ್ಲಿ ನಮ್ಮ ವೀ ವಿ ಸಂಘವು ಶಿಕ್ಷಕರಿಗೆ ಸನ್ಮಾನ ಮಾಡುತ್ತಿರುವುದು ಅತ್ಯಂತ ಸ್ತುತ್ಯಾರ್ಹ ಕೆಲಸ ಎಂದರು.    ವೀವಿ ಸಂಘದ ಕಾರ್ಯದರ್ಶಿ ಹೆಚ್ ಎಂ ಗುರುಸಿದ್ಧಸ್ವಾಮಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ನಮ್ಮ  ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ  ಎಲ್ಲಿ ಶಾಲೆಯ ಅವಶ್ಯಕತೆ ಇತ್ತೋ ಅಲ್ಲೆಲ್ಲಾ ಶಾಲಾ ಕಾಲೇಜುಗಳನ್ನು ನಮ್ಮ ವೀವಿ ಸಂಘ ಆರಂಭಿಸಿ ಈ ಭಾಗದ ಜನರಿಗೆ ಶಿಕ್ಣಣದ ಬೆಳಕನ್ನು ನೀಡಿದೆ ಈ ಸಂಸ್ಥೆಯಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ಸನ್ಮಾನ ಮಾಡುವ ಮೂಲಕ‌ ಅವರ ಸೇವೆಯನ್ನು ನಮ್ಮ ಸಂಸ್ಥೆ ಸದಾ ನೆನೆಯುತ್ತದೆ ಎಂದರು. ಮುಖ್ಯ ಅತಿಥಿ ಕೆ ಎಂ ಮಹೇಶ್ವರ ಸ್ವಾಮಿ ಮಾತನಾಡಿ ಶಿಕ್ಷಕರ ಬೋಧನೆಗಳು ಮಕ್ಕಳ ಬಾಳನ್ನು ಬೆಳಗುವಂತಿರಬೇಕು ಅಂತಹ ಶಿಕ್ಷಕರನ್ನು ಈ ಸಮಾಜ ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ
ಎಸ್ ಮಲ್ಲನಗೌಡ, ಕೋರಿ ವಿರುಪಾಕ್ಷಪ್ಪ ಬೈಲುವದ್ದಿಗೇರಿ ಎರ್ರಿಸ್ವಾಮಿ ಕುಪ್ಪಗಲ್ ಗಿರಿಜಮ್ಮ , ಯಾಳ್ಪಿ ಮೇಟಿ ಪಂಪನಗೌಡ ಕಾತ್ಯಾಯಿನಿ ಮರಿದೇವಯ್ಯ ಜಾನೇಕುಂಟೆ ಸಣ್ಣಬಸವರಾಜ (ಕುಮ್ಮಿ)ಸಿದ್ಧರಾಮ ಕಲ್ಮಠ ಹಾವಿನಾಳ ಶರಣಪ್ಪ ಉಪಸ್ಥಿತರಿದ್ದರು.                        ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀ ವಿ ಸಂಘದ ಉಪಾದ್ಯಕ್ಷ ಅಲ್ಲಂ ಚೆನ್ನಪ್ಪ ಅವರು ವಹಿಸಿಕೊಂಡಿದ್ದರು.  ಕಾರ್ಯಕ್ರಮದಲ್ಲಿ ಸುಮಾರು ೨೫ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಪ್ರಾಚಾರ್ಯರಾದ ವಿ ಎಸ್ ಪ್ರಭಯ್ಯ ಹಾಗು ಶ್ರೀಮತಿ ಸುಶೀಲ ಶಿರೂರು ಅವರು ಸನ್ಮಾನಿತರ ಪರವಾಗಿ ಮಾತನಾಡಿದರು . ಗಾನ ಗಂಧರ್ವ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ ಸತೀಶ್ ಹಿರೇಮಠ ಸ್ವಾಗತಿಸಿದರು. ಡಾ.ದಾನಪ್ಪ ಕಾರ್ಯಕ್ರಮ ನಿರೂಪಿಸಿದರು. ಡಾ ಗೋವಿಂದರಾಜು ವಂದಿಸಿದರು