ಮಂಡಿಯೂರಿ ಕ್ಷಮಾಪಣೆ
ಕೇಳಿದ ಮಾತ್ರಕ್ಕೆ ‘ಅಹಂ’ನ
ಗರಿ ಮೇಲೆರುವುದಾದರೆ
ನೋಡಿಲ್ಲಿ ಸಾವಿರ ದೀರ್ಘದಂಡ
ಆತ್ಮಕ್ಕೆ ಇರಿವ ಮಾತುಗಳಿಗೆ
ಹೆಪ್ಪುಗಟ್ಟುವ ನೆತ್ತರಿಗೆ
ಶಬ್ದವಿಲ್ಲದ ಬಿಕ್ಕುಗಳಿಗೆ
ಇರುಳ ಕತ್ತಲೆಯೇ ನೇವರಿಕೆ
ಮಾತಿನಲ್ಲೇ ಝಳಪಿಸುವ ಶಸ್ತ್ರಾಸ್ತ್ರ
ಊದುವ ರಣಕಹಳೆ
ಒಬ್ಬರಿಗೊಬ್ಬರು ಇರಿದು
ಕೊಲ್ಲುವ ದಿನನಿತ್ಯದಾಟಕ್ಕೆ
ಕೊನೆಯದಾಗಿ
ಸಣ್ಣದೊಂದು ಚುಕ್ಕಿ
ಯುದ್ಧವೆನ್ನುವುದೇ..
ನಾಶದ ಸಂಕೇತ
ರಣಾಂಗಣದಲ್ಲಿ ಗೆದ್ದು
ಅಮರರಾದವರಾರು
ಇತಿಹಾಸದಲ್ಲಿಲ್ಲಾ..!!-
-ಹೇಮಲತಾ ಮೂರ್ತಿ, ಬೆಂಗಳೂರು