ಕನ್ನಡ ಮತ್ತು ಸಂಸ್ಕೃತಗಳ ಅನುವಾದಗಳ ಅನನ್ಯ ಸಾಧಕ ಕೆ.‌ಕೃಷ್ಣಮೂರ್ತಿ -ಪ್ರಭಾರ ಕುಲಪತಿ ಪ್ರೊ. ಎಸ್. ವೆಂಕಟೇಶ್

ಶಂಕರಘಟ್ಡ(ಶಿವಮೊಗ್ಗ), ಅ.6:  ಭಾರತೀಯ ಕಾವ್ಯ ಮೀಮಾಂಸೆಗೆ ಅಪಾರವಾದ ಕೊಡುಗೆಯನ್ನು ನೀಡಿದ ವಿದ್ವಾಂಸರಲ್ಲಿ ಕೆ.‌ಕೃಷ್ಣಮೂರ್ತಿಯವರಿಗೆ ಅಗ್ರಸ್ಥಾನವಿದೆ ಎಂದು ಎಂದು ಕುವೆಂಪು ವಿಶ್ವವಿದ್ಯಾಲಯ ಪ್ರಭಾರ ಕುಲಪತಿಗಳಾದ ಪ್ರೊ.ಎಸ್. ವೆಂಕಟೇಶ್ ಅವರು ಹೇಳಿದರು.                                                    ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಹಾಗೂ ಕೆ. ಕೃಷ್ಣಮೂರ್ತಿ ಜನ್ಮ ಶತಮಾನೋತ್ಸವ ಸಮಿತಿ ಸಹಯೋಗದೊಂದಿಗೆ ಏರ್ಪಡಿಸಿದ್ದ  ‘ಕೆ. ಕೃಷ್ಣಮೂರ್ತಿಯವರ ಮೀಮಾಂಸಾ ಕೃತಿಗಳ ಸಮೀಕ್ಷೆ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.                                        ಅಪಾರವಾದ ಓದು ಮತ್ತು ಪರಿಶ್ರಮದ ಮೂಲಕ ವಿದ್ವತ್ತಿನ‌ ಸ್ಥಾನಕ್ಕೆ ಏರಿದವರು ಕೆ. ಕೃಷ್ಣಮೂರ್ತಿಯವರು‌. ಕನ್ನಡ ಮತ್ತು ಸಂಸ್ಕೃತಗಳ ಅನುವಾದದಲ್ಲಿ ಅನನ್ಯವಾದ ಸಾಧನೆಯನ್ನು ಮಾಡಿದವರು ಕೆ. ಕೃಷ್ಣಮೂರ್ತಿ ಎಂದು ಕುವೆಂಪು ವಿಶ್ವವಿದ್ಯಾಲಯ ಪ್ರಭಾರ ಕುಲಪತಿಗಳಾದ ಪ್ರೊ.ಎಸ್. ವೆಂಕಟೇಶ್ ಹೇಳಿದರು.                  ಮುಂದಿನ ಪೀಳಿಗೆ ಕೃಷ್ಣ ಮೂರ್ತಿಯವರ ಸಾಧನೆಯನ್ನು ಅರಿಯಬೇಕಿದೆ. ಅವರ ಚಿಂತನೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಕ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.                                              ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡಭಾರತಿ ನಿರ್ದೇಶಕ ಡಾ. ಶಿವಾನಂದ ಕೆಳಗಿನಮನಿ ಅವರು ಮಾತನಾಡಿ, ದೇಶದ ಹಿರಿಯ ವಿದ್ವಾಂಸರಲ್ಲಿ ಪಟ್ಟಿಯಲ್ಲಿ ಕೆ.‌ಕೃಷ್ಣಮೂರ್ತಿಯವರ ಹೆಸರು ಶಾಶ್ವತವಾಗಿರುತ್ತದೆ ಎಂದರು.                                                          ಕನ್ನಡ ಭಾರತಿಯ ಪ್ರಾಧ್ಯಾಪಕ ಡಾ. ಜಿ.‌ ಪ್ರಶಾಂತ ನಾಯಕ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಕನ್ನಡ ಭಾರತೀಯ ಸಹ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಉಪಸ್ಥಿತರಿದ್ದರು.

ಪುರುಷೋತ್ತಮ ಪ್ರಾರ್ಥಿಸಿ, ನವೀನ್ ಮಂಡಗದ್ದೆ ನಿರೂಪಿಸಿದರು.
ನಂತರ ನಡೆದ ಗೋಷ್ಠಿಯಲ್ಲಿ ಡಾ.ಹೆಚ್.ನಾಗರಾಜರಾವ್ ಅವರು ಕನ್ನಡ ಕಾವ್ಯ ತತ್ವದ ಬಗ್ಗೆ ಮಾತನಾಡಿದರು.ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಕವಿರಾಜಮಾರ್ಗ ಕೃತಿಯ ಬಗ್ಗೆ ಮಾತನಾಡಿದರು.‌ ಡಾ. ಕೆ. ಲೀಲಾ ಪ್ರಕಾಶ್ ಅವರು ಸೃಜನಶೀಲತೆ ಪಾಂಡಿತ್ಯ, ರುಚಿ ಕೃತಿಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ‌ಉಪಸ್ಥಿತರಿದ್ದರು.