ಬಳ್ಳಾರಿ, ಅ.21: ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ. ಮುದ್ದೇಶ್ ಅವರು ಶುಕ್ರವಾರ ನಗರದ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜು(ಸ್ವಾಯತ್ತತೆ) ಪ್ರಾಚಾರ್ಯ ಡಾ. ಮಂಜುನಾಥ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮುದ್ದೇಶ್ ಅವರು ಮುಂದಿನ ತಿಂಗಳು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಮೂರುದಿನಗಳ ಪತ್ರಿಕೋದ್ಯಮ ಕಾರ್ಯಾಗಾರ ಮಾಡುವ ಇಂಗಿತ ವ್ಯಕ್ತಪಡಿಸಿದರು.
ಕಳೆದ ಹತ್ತು ವರ್ಷಗಳಿಂದ ಸರಳಾದೇವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮ ಪದವಿ ಪೂರೈಸಿ ಉನ್ನತ ಶಿಕ್ಷಣ ಪಡೆಯಲು ನಮ್ಮ ಅಧ್ಯಯನ ಕೇಂದ್ರಕ್ಕೆ ಪ್ರವೇಶ ಪಡೆದು ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪತ್ರಕರ್ತರಾಗಿ, ಉಪನ್ಯಾಸಕರಾಗಿ ಯಶಸ್ವಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಾಚಾರ್ಯ ಡಾ.ಮಂಜುನಾಥ್ ರೆಡ್ಡಿ ಅವರು ಮಾತನಾಡಿ ಮೂರು ದಿನದ ಪತ್ರಿಕೋದ್ಯಮ ಕಾರ್ಯಾಗಾರಕ್ಕೆ ಎಲ್ಲಾ ರೀತಿಯ ನೀಡುವುದಾಗಿ ಹೇಳಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಲಿ ಅವರು, ನಮ್ಮ ವಿಭಾಗದ ಅಭಿವೃದ್ಧಿಗೆ ಬೆಂಬಲ, ಮಾರ್ಗದರ್ಶನ ನೀಡಲು ಡಾ. ಮುದ್ದೇಶ್ ಅವರನ್ನು ಕೋರಿದರು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಟಿ. ಜಯರಾಂ, ಸಿ.ಮಂಜುನಾಥ್, ಕಾಲೇಜಿನ ಹಳೆಯ ವಿದ್ಯಾರ್ಥಿ, ಪತ್ರಕರ್ತ ಟಿ. ಸುಂಕಣ್ಣ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ರುದ್ರಮುನಿ ಉಪಸ್ಥಿತರಿದ್ದರು.
*****