ಕೊಟ್ಟೂರಿನ ಐ.ಎಂ ನಂದೀಶಗೆ ಪಿ.ಹೆಚ್.ಡಿ ಪದವಿ

ಕೊಟ್ಟೂರು, ಅ. 26 :ಪಟ್ಟಣದ ಐ.ಎಂ.ನಂದೀಶ ಅವರು ಡೆವಲಪ್‍ಮೆಂಟ್ ಆಫ್ ನೋವೆಲ್ ಅನಲೈಟಿಕಲ್ ಮೆಥಡ್ಸ್ ಫಾರ್ ದಿ ಆಸ್ಸೆ ಆಫ್ ಸೆಲೆಕ್ಟೆಡ್ ಡ್ರಗ್ಸ್ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಪಿಹೆಚ್‍ಡಿ. ಪದವಿ ನೀಡಿದೆ.
ದಾವಣಗೆರೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಡಿ.ಎಚ್. ಮಂಜುನಾಥ ಮತ್ತು ಡಾ.ಯಲ್ಲೂರ ಸಿ.ಬಸಪ್ಪ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು.
—–

17:42