ಸಿರಿಗನ್ನಡ ವೇದಿಕೆ ವಿಜಯನಗರ ನೂತನ ಜಿಲ್ಲಾಧ್ಯಕ್ಷರಾಗಿ ಇಂ. ಬಸವರಾಜ ಕೆ.ಎಂ ನೇಮಕ

ವಿಜಯನಗರ (ಹೊಸಪೇಟೆ), ಅ.30: ಸಿರಿಗನ್ನಡ ವೇದಿಕೆಯ ವಿಜಯನಗರ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನಗರದ ನಿವೃತ್ತ ಇಂ. ಬಸವರಾಜ ಕೆ.ಎಂ.
ಅವರು ನೇಮಕವಾಗಿದ್ದಾರೆ.


ಭಾನುವಾರ ಹೊಸಪೇಟೆ ನಗರದಲ್ಲಿ‌ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಜಿ ಎಸ್ ಗೋನಾಳ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆ.‌ಬಸವರಾಜ್ ಕೆ. ಎಂ ಹಾಗೂ
ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಸಹಾಯಕ ಪ್ರಾಧ್ಯಾಪಕ ಆಲಂ‌ಭಾಷ ಅವರನ್ನು ಸರ್ವಾನುಮತದ ಆಯ್ಕೆಯನ್ನು ಘೋಷಿಸಲಾಯಿತು.
ಇದೇ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಜಿ ಎಸ್. ಗೋನಾಳ್ ಅವರು ಉಭಯರಿಗೂ ನೇಮಕ ಆದೇಶ ಪತ್ರಗಳನ್ನು ನೀಡಿ ಶುಭಹಾರೈಸಿದರು.
ನೂತನ ಜಿಲ್ಲಾಧ್ಯಕ್ಷರುಗಳು ಆದಷ್ಟು ಬೇಗ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳನ್ನು ಆಯ್ಕೆಮಾಡಿ ಪಟ್ಟಿಯನ್ನು  ರಾಜ್ಯ ಘಟಕದಿಂದ ಅನುಮೋದನೆ ಪಡೆದುಕೊಳ್ಳಬೇಕು ಹಾಗೂ ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಬೇಕೆಂದು ಪತ್ರದಲ್ಲಿ ಆಶಿಸಲಾಗಿದೆ
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಮಂಜುನಾಥ ಚಿತ್ರಗಾರ ಮತ್ತಿತರರು ಉಪಸ್ಥಿತರಿದ್ದರು.
*****