ಅನುದಿನ ಕವನ-೧೦೩೫, ಕವಿ: ಎ.ಎನ್.ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಕನ್ನಡವೆಂದರೆ….ಕವನ ವಾಚನ: ವೈಷ್ಣವಿ, ವಿಜಯಪುರ

“ಇದು ಬರಿದೆ ಹನಿಗವಿತೆಯಲ್ಲ. ಕನ್ನಡ ಹೃದಯಗಳ ಭಾವಪ್ರಣತೆ. ಜೀವ-ಭಾವಗಳ ಬೆಳಕಿನ ಅಕ್ಷರಪ್ರಣತೆ. ಒಪ್ಪಿಸಿಕೊಳ್ಳಿ…”

– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಕನ್ನಡವೆಂದರೆ….

ಕನ್ನಡವೆಂದರೆ ಅಲ್ಲ ಬರಿದೆ ನುಡಿ..
ನನ್ನೆದೆಯ ಭಾವ-ಭಾಷ್ಯಗಳ ಗುಡಿ
ನರನರಗಳ ಮಿಡಿತದ ಜೀವನಾಡಿ
ಉಸಿರು ಉಸಿರಿನ ಸ್ವರದಾಂಗುಡಿ.!

ಕನ್ನಡವೆಂದರೆ ಅಲ್ಲ ಪದ ಶಬ್ಧಗಳ ಶಕ್ತಿ
ಮುಕ್ಕೋಟಿ ಕನ್ನಡಿಗರ ಭಾವಾಭಿವ್ಯಕ್ತಿ
ಕರುನಾಡ ಮನೆ-ಮನೆ ಬೆಳಗುವ ದೀಪ್ತಿ
ಜೀವ-ಜೀವನಗಳ ನಿತ್ಯ ಸತ್ಯ ಸ್ಫೂರ್ತಿ.!

-ಎ.ಎನ್.ರಮೇಶ್. ಗುಬ್ಬಿ.