ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದ ಸಮೀಪ ಡಾ. ಪುನೀತ್ ರಾಜಕುಮಾರ್ ಪುತ್ಥಳಿ ಇರುವುದು ಸರಿಯಷ್ಟೇ. ಪುನೀತ್ ರಾಜ್ ಕುಮಾರ್ ಪುತ್ಥಳಿ ವೀಕ್ಷಿಸಲು ಪ್ರತಿದಿನವೂ ಸಾವಿರಾರು ಜನರು ಆಗಮಿಸುವರು. ಈ ಪ್ರೇಕ್ಷಣೀಯ ಸ್ಥಳದಲ್ಲಿ ಬೀದಿ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪ್ರತಿದಿನ ಸಂಜೆ ನಗರದ ನಾಗರಿಕರು ಇಲ್ಲಿಗೆ ವಾಕಿಂಗ್, ಗಾಳಿಸೇವನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ, ಬೀದಿ ದೀಪಗಳು ಕಾರ್ಯನಿರ್ವಹಿಸದೇ ಇರುವುದರಿಂದ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದೇ ಜ. 21ರಂದು ಅಂದಿನ ಸಚಿವರಾದ ಬಿ. ಶ್ರೀರಾಮುಲು, ಆರ್ ಅಶೋಕ್ ಹಾಗೂ ನಗರದ ಮೇಯರ್ ಎಂ. ರಾಜೇಶ್ವರಿ ಅವರು ಡಾ. ರಾಜಕುಮಾರ್ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಪುನೀತ್ ಅವರ ಪುತ್ಥಳಿ ಯನ್ನು ಅದ್ದೂರಿಯಾಗಿ ಉದ್ಘಾಟಿಸಿದ್ದರು., ಕರ್ನಾಟಕದಲ್ಲೇ ಅತಿ ಎತ್ತರದ ಡಾ. ಪುನೀತ್ ರಾಜಕುಮಾರ್ ಅವರ ಪುತ್ಥಳಿ ಎಂಬ ಖ್ಯಾತಿ ಪಡೆದು ನಗರದ ಪ್ರೇಕ್ಷಣಿಯವಾದ ಈ ಸ್ಥಳದಲ್ಲಿ ಸಂಜೆಯಾಗುತ್ತಲೇ ಕತ್ತಲು ಕವಿಯುವುದು ನೋವಿನ ವಿಚಾರ . ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಬೇಕು.
-ಸಿ. ಸುನಿಲ್ ಕುಮಾರ್
ಪ್ರಥಮ ವರ್ಷ ಪತ್ರಿಕೋದ್ಯಮ ವಿದ್ಯಾರ್ಥಿ
ಶ್ರೀಮತಿ ಸರಳಾದೇವಿ ಸತೀಶ್ಚಂದ್ರಚ ಅಗರ್ ವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜು ( ಸ್ವಾಯತ್ತ ) ಬಳ್ಳಾರಿ.
—–