ಅನುದಿನ ಕವನ-೧೦೩೯, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು

೫ ಹಾಯ್ಕುಗಳು


ಮೌನದ ಅರ್ಥ
ಕೇಳಿದೆ; ತುಟಿಯಲೇ
ನಕ್ಕಳವಳು

ಒಂಟಿ ಮರದ
ಸಂಕಟ; ಹಕ್ಕಿ ಹಾಡು
ಹೊಸ ಚೈತನ್ಯ

ಒಲವ ಗಂಧ
ಸೂಸಲು; ಇಬ್ಬರಲೂ
ಹಬ್ಬದುತ್ಸಾಹ

ಗೋರಿ ಮೇಲಿನ
ಹೂವಿನ ಚಲುವಿಗೆ
ಸ್ಮಶಾನ ಮೌನ

ನಿನ್ನೊಲವಲಿ
ಎಲ್ಲವನೂ ಮರೆತೆ
ನನ್ನನೂ ಸಹ!

ಸಿದ್ದಲಿಂಗಪ್ಪ ಬೀಳಗಿ

– ಸಿದ್ದಲಿಂಗಪ್ಪ ಬೀಳಗಿ, ಹುನಗುಂದ