ಬಳ್ಳಾರಿ:ವಿಶ್ವಜ್ಞಾನಿ ಬಾಬಾಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ಅವರ ಸಮಾಜಮುಖಿ ಹಾಗೂ ದೂರದೃಷ್ಟಿಯ ಚಿಂತನೆಯ ಫಲವಾಗಿ ಭಾರತದ ಶ್ರೇಷ್ಠ ಸಂವಿಧಾನ ರೂಪಗೊಂಡಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಸಾಮಾಜಿಕ ಪರಿವರ್ತನೆಗಾಗಿ ಭೀಮವಾದ) ಜಿಲ್ಲಾ ಘಟಕ ಗುರುವಾರ ನಗರದಲ್ಲಿ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವದ ಇತರೆ ರಾಷ್ಟçಗಳಿಗಿಂತ ನಮ್ಮ ದೇಶದ ಸಂವಿಧಾನ ವಿಶಿಷ್ಟ, ಮಾದರಿ ಸಂವಿಧಾನವಾಗಿದೆ. ದೇಶದ ಎಲ್ಲಾ ಜಾತಿ, ಧರ್ಮದ ಜನರಿಗೆ ಸಮಾನತೆ, ಘನತೆಯಿಂದ ಬದುಕುವ ಹಕ್ಕು, ಉದ್ಯೋವಕಾಶಗಳು, ಸರಕಾರಿ ಸೌಲಭ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಿರುವುದೇ ಬಾಬಾಸಾಹೇಬರ ವಿಶಾಲ ಮನೋಭಾವವನ್ನು ಪರಿಚಯಿಸುತ್ತದೆ ಎಂದು ಹೇಳಿದರು.
ಬಾಬಾಸಾಹೇಬರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕು ಸಮಾಜದ ಪ್ರಗತಿಗೆ ದುಡಿಯಬೇಕು ಎಂದರು.
ವಿಶ್ವದಲ್ಲೇ ಶ್ರೇಷ್ಠವಾಗಿರುವ ಭಾರತದ ಸಂವಿಧಾನದ ಮೇಲೆ ಪಟ್ಟಭದ್ರರ ಕರೀನೆರಳು ಬಿದ್ದಿದೆ. ಈ ಕುರಿತು ದೇಶದ ಹಿಂದುಳಿದ, ದಲಿತ, ಅಲ್ಪಸಂಖ್ಯಾತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲಾ ಸಮುದಾಯಗಳು ಎಚ್ಚರಗೊಳ್ಳಬೇಕು ಎಂದು ತಿಳಿಸಿದರು.
ಲಿಂಗ ಸಮಾನತೆಗಾಗಿ ಶ್ರಮಿಸಿದ ಡಾ. ಅಂಬೇಡ್ಕರ್ ಅವರು ಮಹಿಳೆಯರ ಕಲ್ಯಾಣಕ್ಕಾಗಿ ತಮ್ಮ ಕಾನೂನು ಮಂತ್ರಿಯ ಪದವಿಗೆ ರಾಜೀನಾಮೆ ನೀಡಿದರು. ದೇಶದ ಸ್ವಾತಂತ್ರö್ಯದ ಜತೆ ಸಮಾನತೆಗಾಗಿ ದುಡಿದ ಮಹಾ ನಾಯಕ ಬಾಬಾಸಾಹೇಬರು ಪ್ರಾತಃ ಸ್ಮರಣೀಯರು ಎಂದು ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಯುವ ಶಕ್ತಿ) ಉತ್ತರ ಕರ್ನಾಟಕ ಕಾರ್ಮಿಕ ಘಟಕದ ಅಧ್ಯಕ್ಷ ಬಿ.ರುದ್ರಪ್ರಸಾದ, ಜಿಲ್ಲಾ ಘಟಕದ ಅಧ್ಯಕ್ಷ ವಿ.ಜಯಕುಮಾರ್, ಕಾರ್ಮಿಕ ಘಟಕದ ಜಿಲಾಧ್ಯಕ್ಷ ಯನ್ನಪ್ಪ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪರಮೇಶ್ ಮಾತನಾಡಿದರು.
ಕೋಳೂರು ನಾಡಕಚೇರಿಯ ಉಪ ತಹಶೀಲ್ದಾರ್ ಯಾಕುಬ್ ಅಲಿ, ಕರವೇ(ಯುವಶಕ್ತಿ) ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಮತಾ, ಡಿಎಸ್ಎಸ್(ಭೀಮವಾದ) ಮಹಿಳಾ ಘಟಕದ ಉಸ್ಮಾ ಭಾನು, ಕುರುಗೋಡು ತಾಲೂಕು ಘಟಕದ ಅಧ್ಯಕ್ಷ ಬೈಲೂರು ನಾಗೇಂದ್ರ, ವಿದ್ಯಾರ್ಥಿ ಘಟಕದ ಗೋವರ್ಧನ್, ಕರವೇ(ಯುವ ಶಕ್ತಿ) ಮುಖಂಡ ರಾಮಾಂಜನೇಯುಲು, ನ್ಯಾಯವಾದಿ ಸುನೀತ ಮತ್ತಿತರರು ಉಪಸ್ಥಿತರಿದ್ದರು.
ಡಿಎಸ್ಎಸ್ ಜಿಲಾಧ್ಯಕ್ಷ ಬೈಲೂರು ಮಲ್ಲಿಕಾರ್ಜುನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘಟನಾ ಸಂಚಾಲಕ ಶಿವಕುಮಾರ್ ಸಂಗನಕಲ್ಲು ನಿರೂಪಿಸಿದರು.