ಬುಡಾ ನೂತನ ಆಯುಕ್ತ ವೀರೇಂದ್ರ ಕುಂದಗೋಳ

ಬಳ್ಳಾರಿ:: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ವೀರೇಂದ್ರ ಕುಂದಗೋಳ ಅವರು ಶುಕ್ರವಾರ(ನ.27) ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರು ನೂತನ ಆಯುಕ್ತರನ್ನು ಅಭಿನಂದಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.