ಮರೆವು
ಮರೆಯಬಾರದು ಎಂದೂ ನಡೆದು ಬಂದ ದಾರಿಯನು
ಮರೆಯುವರು ಏರಿದ ಮೇಲೆ ಮಾಡಿದ ಸಹಾಯವನು
ಮರೆಯದೆ ನೆನಪಲಿರಿಸಿ ಜೀವನದ ಪ್ರತೀ ಕ್ಷಣವನು
ಮರೆತರೆ ಮರೆಯಾಗಿಸುವಿರಿ ಕಳೆದ ಸುಂದರ ದಿನವನು
ಬಾಲ್ಯದಲಿ ಕಲಿವ ಪಾಠವ ಮರೆತರೆ ಬದುಕಲಾದೀತೇ
ಯೌವನದಿ ಮರೆತು ಹೆಜ್ಜೆಯ ತಪ್ಪಿಟ್ಟರೆ ಅಳಿಸಲಾದೀತೇ
ಅರ್ಧಾoಗಿ ಬಂದಾಗ ಹೆತ್ತವರ ಮರೆತರೆ ಸಖ್ಯವಾದೀತೇ
ಸತ್ಯವನು ಮರೆತರೆ ಜಗದೊಳು ಮಿಥ್ಯವಾಗಿರಲಾದೀತೇ
ಕಷ್ಟ ಕಾಲದಿ ಕರವ ಪಿಡಿದವರ ಮರೆತರೆ ಮೆಚ್ಚಲಾದೀತೇ
ಗುರು ಹಿರಿಯರ ಮರೆತರೆ ಜೀವನದಲಿ ಶುಭವಾದೀತೇ
ಬಂಧನಗಳ ನಡುವೆ ಕರ್ತವ್ಯವ ಮರೆತರೆ ಸುಖವಿದ್ದೀತೇ
ಎಲ್ಲಾ ಇದೆಯೆಂದು ದೇವರನು ಮರೆತರೆ ಜೀವನವಿದ್ದೀತೇ
ಮರೆವು ಸಹಜ ಇಂದಿನ ಒದ್ದಾಟದ ಬದುಕ ರೀತಿಯಲಿ
ಕಷ್ಟ ಸಾಧ್ಯವು ಸಕಲವನು ನೆನಪಿನಲಿರಿಸಲು ಮಸ್ತಕದಲಿ
ಮರೆಯದಿರಿ ಎಂದಿಗೂ ನಮ್ಮ ನೆಲೆಯನು ಜೀವನದಲಿ
ಮರೆತು ಜೀವಿಸದಿರಿ ತಮ್ಮ ತನವನು ನಿಜ ಬದುಕಿನಲಿ
-ಡಾ. ವಾಣಿಶ್ರೀ ಕಾಸರಗೋಡು
ಗಡಿನಾಡ ಕನ್ನಡತಿ
——