ಅನುದಿನ ಕವನ-೧೦೫೬, ಕವಿಯಿತ್ರಿ:ರಮ್ಯ ಕೆ ಜಿ, ಮೂರ್ನಾಡು, ಕೊಡಗು, [ಮಕ್ಕಳ ಪದ್ಯ]

ಮಕ್ಕಳ ಪದ್ಯ

ಅಮ್ಮ ನಂಗೊಂದು ಪೆನ್ಸಿಲ್ ಬೇಕು
ಚಿತ್ರ ಬಿಡಿಸೋಕೆ
ಜೊತೆಗೆ ಒಂದು ರಬ್ಬರ್ ಕೊಡ್ಸು
ತಪ್ಪು ಅಳಿಸೋಕೆ…

ಅಮ್ಮ ನಂಗೊಂದು ಅಂಗಿ ಬೇಕು
ಪೇಟೆಗೆ ಹೋಗೋಕೆ
ಜೊತೆಗೆ ಒಂದು ಲುಂಗಿ ಕೊಡ್ಸು
ಡಾನ್ಸು ಮಾಡೋಕೆ…

ಅಮ್ಮ ನಂಗೊಂದು ದೋಸೆ ಹಾಕು
ಹಂಚಿ ತಿನ್ನೋಕೆ
ಜೊತೆಗೆ ಸ್ವಲ್ಪ ಚಟ್ನಿ ಇರಲಿ
ರುಚಿನ ನೆಂಚೋಕೆ…

ಅಮ್ಮ ನಂಗೊಂದು ಆಟಿಕೆ ಬೇಕು
ಆಟ ಆಡೋಕೆ
ಮೆಲ್ಲಗೆ ಚೂರು ನಿಟಿಕೆ ಮುರಿಯೇ
ದೃಷ್ಟಿ ತೆಗೆಯೋಕೆ…

ಅಮ್ಮ ನಂಗೊಂದು ಆಸೆ ಕಣೆ
ಊರೂರು ಸುತ್ತೋಕೆ
ಸೈಕಲ್ ಒಂದು ಕೊಡ್ಸು ಸಾಕು
ಕಡಿಮೆ ಕಾಸಿಗೆ…

– ರಮ್ಯ ಕೆ ಜಿ, ಮೂರ್ನಾಡು, ಕೊಡಗು
—–