ಚಿಂದಿ ಹಾಯುವ ಹುಡುಗ ನಾನು…..
ಒಂದೊಂದೆ ಚಿಂದಿಯನ್ನು ಹಾಯ್ದುಕೊಂಡೆ
ಒಂದನ್ನೊಂದು
ಹೊಲೆಯುತ್ತಲೇ ಇರುವೆ
ಒಂದು ಕಡೆ ಹೊಲೆದರೆ, ಮತ್ತೊಂದು ಕಡೆ ಕಿತ್ತು ಬರುತ್ತಿದೆ
ಆದರೂ,
ಜೋಡಿಸುತ್ತಿನೇಂಬ ಭರವಸೆ ಮಾತ್ರ ಸೋತಿಲ್ಲ
ಕಲ್ಲು ಹಾಯುವ ಹುಡುಗ ನಾನು
ಬಗೆ ಬಗೆಯ ಕಲ್ಲನ್ನು ಹಾಯ್ದುಕೊಂಡೆ
ಒಂದರ ಮೇಲೊಂದು ಜೋಡಿಸಿ ಜೋಪಡಿ ಕಟ್ಟುತ್ತಿರುವೆ
ಒಂದು ಕಡೆ ಕಟ್ಟಿದರೆ, ಮತ್ತೊಂದು ಕಡೆ ಕಿತ್ತು ಬೀಳುತ್ತಿದೆ
ಆದರೂ,
ಕಟ್ಟುತ್ತೇನೆಂಬ ಭರವಸೆ ಮಾತ್ರ ಸೋತಿಲ್ಲ
ಕಂಬ ಎಳೆಯುವ ಹುಡುಗ ನಾನು
ಟ್ರಾನ್ಸ್ಫಾರ್ನಿಂದ ಲೈನು ತಂದು
ತಂತಿ
ಕಂಬಗಳ ತಂದು
ಬೆಳಕು ನೀಡುವ ಬರ್ಲ್ಫ ಹಾಕಿದಾಗ
ಒಂದು ಕಡೆ ಬೆಳಕು ಬಂದರೆ
ಮತ್ತೊಂದು ಕಡೆ
ತಂತಿ ಕಿತ್ತು ಕತ್ತಲಾದಂತೆ
ಆದರೂ,
ಬೆಳಕು ನೀಡುತ್ತೇನೆಂಬ ಭರವಸೆ ಮಾತ್ರ ಸೋತಿಲ್ಲ
ಬೀಜಗಳನ್ನು ಬಿತ್ತುವ ಹುಡುಗ ನಾನು
ಒಂದೊಂದು ಬೀಜಗಳು ಒಂದೊಂದು ಮರ
ದೊಡ್ಡ ಮರ ಸಣ್ಣ ಮರವನ್ನು ಕುಬ್ಜವಾಗಿಸಿದೆ
ದೊಡ್ಡದರ ನಡುವೆ ಸಣ್ಣವರನ್ನು ಬೆಳೆಸಲು ಹೊರಟ ಹುಂಬ ನಾನು
ದೊಡ್ಡ ಮರ ನನ್ನನ್ನು ನೋಡಿ ವ್ಯಂಗ್ಯ ಮಾಡುತ್ತಿದೆ
ಸಣ್ಣ ಮರವನ್ನು ದೊಡ್ಡದು ಮಾಡುತದತೇನೆಂಬ ಭರವಸೆ ಮಾತ್ರ ಸೋತಿಲ್ಲ
ಕಾನೂನು ಕಾಯುವ ಹುಡುಗ ನಾನು
ಪೊಲೀಸರು, ಅಧಿಕಾರಿಗಳು ಅಟ್ಟಾಡಿಸಕೊಂಡು ನನ್ನ ಹೊಡೆಯುತಿದ್ದಾರೆ
ಒಂದು ಕಡೆ ಹೊರದೇಳಿಸುತಿದ್ದರೆ
ಮತ್ತೊಂದು ಕಡೆ ಮತ್ತೇಳಿಸುತ್ತದೆ
ಆದರೂ,
ನ್ಯಾಯಕ್ಕಾಗಿ ಅಂಗಲಾಚಿದ ಭರವಸೆ ಮಾತ್ರ ಸೋತಿಲ್ಲ
ಯಾಕೆಂದರೆ,
ಚಿಂದಿ ಹಾಯುವ ಹುಡುಗ ನಾನು
-ಹಾರೋಹಳ್ಳಿ ರವೀಂದ್ರ, ಮೈಸೂರು
—-