ಅನುದಿನ ಕವನ-೧೦೬೯, ಕವಿ:ಲೋಕೇಶ್ ಮನ್ವಿತಾ, ಬೆಂಗಳೂರು

ಕನಸುಗಳು
ವಾಪಸು ನೆನಪಾಗುವುದಿಲ್ಲ
ಎಚ್ಚರಗೊಂಡ ಮೇಲೆ

ಎಚ್ಚತ್ತಗೊಂಡ ಮೇಲೆ
ಎಂತಹುದೋ
ಬಹು ಮುಖ್ಯದ್ದು ಜೊತೆ ಇಲ್ಲವಾಗುತ್ತದೆ

ಜೊತೆ ಇಲ್ಲವಾದ ಮೇಲೂ
ಜೊತೆಗಿದ್ದದ್ದುರ ಜೊತೆ
ಹೆಜ್ಜೆಗಳು ಸಾವಾಗಿರುತ್ತವೆ

ನಡೆಯುತ್ತ ನಡೆಯುತ್ತಾ
ಬದುಕು ಅಲೆಯುತ್ತಿರುತ್ತದೆ
ಉಸಿರಲ್ಲೀಗ ನಿರ್ಜೀವ ಭಾವಗಳು

ಮತ್ತೇ ಮತ್ತೇ ಜೀವಂತಗೊಳಿಸಲು
ಉಸಿರನೂದಿ ಉಸಿರನೂದಿ
ಕಂಗಳು ನಿರೀಕ್ಷೆಯಾಗುತ್ತವೆ.

ನಿರೀಕ್ಷೆಗಳು ನೀನಿಲ್ಲದೆಯೂ
ಗರ್ಭ ತಾಳುತ್ತವೆ
ಮತ್ತೇ
ಕನಸುಗಳು ವಾಪಾಸು ಹುಟ್ಟುತ್ತವೆ

-ಲೋಕೇಶ್ ಮನ್ವಿತಾ, ಬೆಂಗಳೂರು
—–