ಬಳ್ಳಾರಿಯಲ್ಲಿ ಕಾಯಿಪಲ್ಲೆ (ತರಕಾರಿ) ಮಾರಾಟ ಮಾಡಿ ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು

ಬಳ್ಳಾರಿ, ಡಿ.16: ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಆಗ್ರಹಿಸಿ ಕಳೆದ 24 ದಿನಗಳಿಂದ ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿರುವ ಜಿಲ್ಲೆಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಶನಿವಾರ ನಗರದಲ್ಲಿ ಕಾಯಿಪಲ್ಲೆ ಮಾರಾಟಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರದ ಎಸ್.ಎಸ್.ಎ(ಸರಳದೇವಿ) ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದುಗಡೆ ನಡೆಸುತ್ತಿರುವ ಮುಷ್ಕರ ಸ್ಥಳದಲ್ಲಿ ಬಳ್ಳಾರಿ ಜಿಲ್ಲೆಯ ಅತಿಥಿ ಉಪನ್ಯಾಸಕರು ತಮ್ಮ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ತರಗತಿ ಬಹಿಷ್ಕರಿಸಿದ 24ನೇ ದಿನ ಕಾಯಿಪಲ್ಲೆ(ತರಕಾರಿ) ಮಾರುವ ಮೂಲಕ ಸರಕಾರದ ಗಮನ ಸೆಳೆದರು.
ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲಾ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಮುಖಂಡರಾದ ರಫೀಕ್ ಎಂ , ಹನುಮೇಶ ಹೆಚ್ , ರಮೇಶ ಎಸ್ ಎಂ, ಗುರುರಾಜ್, ಜಗದೀಶ್, ಬಸವರಾಜ್, ಹೊನ್ನೂರು ಸಾಬ್, ಹುಲ್ಲಿಕುಂಟ್ಟೇಶ್,
ಶುಭ ಜೋತಿ, ರುದ್ರಮ್ಮ, ಜಯಮ್ಮ , ಚರಿತ್ರ ಹೂಗಾರ್ ಮತ್ತಿತರರು ಪಾಲ್ಗೊಂಡಿದ್ದರು.
——