ನಿಮಗಾಗಿ ನಾವು ಸಂಸ್ಥೆಯಿಂದ ಸತತ ಮೂರನೇ ವರ್ಷವೂ ಹೊದಿಕೆ ಜೀವಕೆ ಯೋಜನೆ ಅನುಷ್ಠಾನ: ಮೆಚ್ಚುಗೆ

ಬಳ್ಳಾರಿ, ಡಿ.20:  ನಗರದ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮುಖ್ಯ ರಸ್ತೆಗಳು ಮತ್ತು ವೃತ್ತಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲಿ ತಂಗಿರುವ ಸೂರಿರಲ್ಲದ. ಬಡವರು,  ಅನಾಥರು, ಬಿಕ್ಷುಕರಿಗೆ ನಗರದ ನಿಮಗಾಗಿ ನಾವು ಸಂಸ್ಥೆ ಪ್ರತಿ ವರ್ಷದಂತೆ ಈ ಬಾರಿಯೂ ಹೊದಿಕೆಗಳನ್ನು ವಿತರಿಸುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬಳ್ಳಾರಿ ನಗರದಲ್ಲಿ ಸೂರಿಲ್ಲದ ಎಷ್ಟೋ ಮಂದಿ ಚಳಿಯ ರಾತ್ರಿಗಳನ್ನು ನಡುಗುತ್ತಾ ನಿದ್ದೆ ಇಲ್ಲದೆ ಕಳೆಯುತ್ತಿರುವುದನ್ನು ಗಮನಿಸಿ ಸಂಸ್ಥೆ ಇಂತಹವರಿಗೆ ಹೊದ್ದುಕೊಳ್ಳಲು ಹೊದಿಕೆಯನ್ನು ನೀಡುವ ‘ಹೊದಿಕೆ ಜೀವಕೆ’ ಯೋಜನೆ ರೂಪಿಸಿಕೊಂಡು ರಾತ್ರಿ ಇಡೀ ನಗರದಲ್ಲಿ ಸಂಚರಿಸಿ ಹೊದಿಕೆ ನೀಡಿ ಆಸರೆಯಾದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ  ಹೊದಿಕೆ ಜೀವಕೆ ಯೋಜನೆಯು ಡಿಸೆಂಬರ್ ತಿಂಗಳು ಪೂರ್ತಿ ನಡೆಯಲ್ಲಿದ್ದು ಹಂತಹಂತವಾಗಿ ವಿತರಿಸಲಾಗುವುದು ಎಂದರು.
ಇದೇ ವಾರದಲ್ಲಿ  ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅನಾಥರಿಗೆ ಹೊದಿಕೆಗಳನ್ನು ವಿತರಣೆ ಮಾಡಲಿದ್ದೇವೆ ಎಂದು ಹೇಳಿದರು.
ಕಾರ್ಯನಿರ್ವಾಹಕ ಸುರೇಶ್ ಮಾತನಾಡಿ, ಸಾರ್ವಜನಿಕರು ತಮ್ಮ ಸುತ್ತಮುತ್ತ ಹೊದಿಕೆಗಳ ಅವಶ್ಯಕತೆ  ಇರುವರ ಬಗ್ಗೆ ಮಾಹಿತಿ ನೀಡಿದರೆ ಅವರಿಗೂ ಸಂಸ್ಥೆ ಹೊದಿಕೆಗಳನ್ನು ವಿತರಿಸಲಿದೆ  ಎಂದು ತಿಳಿಸಿದರು.
ಸಂಸ್ಥೆಯ ಪದಾಧಿಕಾರಿಗಳಾದ ಸಂದೀಪ್,ಹೇಮಂತ್,ಪಂಪಾಪತಿ, ನಾಗರಾಜ್.ಬಿ.,ಸುರೇಶ್,ವಿನಯ್,ನಾಗರಾಜ್.ಕೆ,ಬಾಲಸುಬ್ರಹ್ಮಣ್ಯ,ವೀರೇಶ್,ದಕ್ಷಿಣ ಮೂರ್ತಿ,ಮೆಹಬೂಬ್ ಭಾಷ,ಆನಂದ್, ಯೋಗಿ, ವಿಶ್ವ, ಅಜಿತ್, ಸುದರ್ಶನ್, ಮಾರುತಿ ಉಪಸ್ಥಿತರಿದ್ದರು.
—–