ಅನುದಿನ ಕವನ-೧೦೯೦, ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಸಿರಿಧಾನ್ಯ

ಸಿರಿಧಾನ್ಯ

ಸಿರಿಧಾನ್ಯ ಸಿರಿಧಾನ್ಯ ಸಿರಿಧಾನ್ಯ
ಅವುಗಳನುಂಡವನು ಸದಾ ಧನ್ಯ
ಸಂಕರದ ತಳಿಗಳಲ್ಲಿ ಆಕಾರ ವುಳಿದು
ಜೀವಸತ್ವಗಳು ನಾಶವಾಗಿಹುದು
ಸತ್ವಯುತ ಆಹಾರ ಸದೃಢ ಶರೀರ
ಬೆಳೆಸು ನೀನು ಬಳಸು ನೀನು
ಸಿರಿ ಧಾನ್ಯ ವನು ಇದನು ತಿಳಿದು
ಮೋಜಿಗಾಗಿ,ಬಾಯ್ ರುಚಿ ಗಾಗಿ ಏನೇನೋ ತಿಂದು
ಹಾಳು ಮಾಡಿಕೊಳ್ಳ ಬೇಡ ಈ ನಿನ್ನ ದೇಹವನು
ಸಿರಿ ಧಾನ್ಯ ತಿಂದುಂಡು ಗಟ್ಟಿ ಮಾಡಿಕೋ ನಿನ್ನ ತನು ಮನವನ್ನು
ರಾಗಿ ಸಾಮೆ ನವಣೆ ಹಾರಕ
ಇವು ಶ್ರೇಷ್ಠ ನಮ್ಮ ದೇಹಕೆ ಪೂರಕ
ಜೋಳ ಸಜ್ಜೆ ಕೋರಲು ಊದಲು
ನಮ್ಮ ದೇಹಕ್ಕೆ ತುಂಬುವುದು
ಆರೋಗ್ಯ ದ ಹೊನಲು
ರಾಸಾಯನಿಕ ಔಷಧ ಗೊಬ್ಬರ ಬಳಸದ ಸಾವಯವ ಕೃಷಿ ಯಲ್ಲಿ ಬೆಳೆದ ಸಿರಿ ಧಾನ್ಯ
ಆರೋಗ್ಯ ದೃಷ್ಟಿ ಯಲ್ಲಿ ದಷ್ಟ ಪುಷ್ಟಿ ಯಲ್ಲೂ  ಜೀವನ ಕೆ ಅಮೂಲ್ಯ
ಸಿರಿ ಧಾನ್ಯ ತೊರೆದು ಜೀವಿಸುವುದೆಂದರೆ ಕಾಣುವೆವು ನಾವಲ್ಲಿ
ಬದುಕಿನುದ್ದಕ್ಕೂ ಬರೀ ವೈಫಲ್ಯ


-ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ
—–