ಪ್ರಿಯತಮ
ಒಲವಿನ ಮಾತಿಂದ
ಸನಿಹಕೆ ಬಂದೆನ್ನ
ಎಚ್ಚರಿಸಿದೆ ಭಾವನೆಯ
ಲೋಕದಲಿ ತೇಲಾಡುತ
ಅಂತಾರಾಳದ ಕದವ ತೆರೆದು
ಸಿಂಗರಿಸಿದೆ ಹೃದಯಮಂದಿರದಿ
ಈ ನಿನ್ನ ಚೆಲವಿನ ಮುಖಪಟವ
ಸದಾ ಮಂದಹಾಸದ ನಿನ್ನಂದವ|
ಕಾಡುವವು ಕನಸುಗಳು
ಬೇಡುವವು ಹಗಲಿರುಳು
ಆ ನಿನ್ನ ಪ್ರೇಮದ ಹಿತನುಡಿಗಳ
ಗೌರವದಿ ಸ್ವೀಕರಿಸಿದೆ ಬಯಕೆಗಳ|
ಯಾವಜನ್ಮದ ಮೈತ್ರಿಯೋ
ಈ ಜನ್ಮದಲಿ ಸೆಳೆದು
ಮನಸುಗಳ ಮಿಲನದಲಿ
ಕಾವ್ಯಾಂಕುರವಾಗಿ ಪದಗಳಲಿ||
-ಧರಣೀಪ್ರಿಯೆ, ದಾವಣಗೆರೆ
*****