ರಕ್ತದಾನಿ ಶಿಕ್ಷಕಿ ಶ್ರೀ ಗೌರಿಗೆ ಐಎಂಎಯಿಂದ ಸನ್ಮಾನ

ಕೊಪ್ಪಳ ತಾಲೂಕಿನ ಹೊಸಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ, ರಕ್ತದಾನಿ ಶ್ರೀ ಗೌರಿ ಅವರನ್ನು ಇಂದು ಸತ್ಕರಿಸಿ ಗೌರವಿಸಲಾಯಿತು.
ಗಂಗಾವತಿಯಲ್ಲಿ ಮಂಗಳವಾರ ಜರುಗಿದ ವಿಶ್ವ ಏಡ್ಸ್ ದಿನಾಚರಣೆ
ಕಾರ್ಯಕ್ರಮದಲ್ಲಿ ಸಮಾಜಮುಖಿ ಶಿಕ್ಷಕಿಯನ್ನು ಸನ್ಮಾನಿಸಲಾಯಿತು. 2005 ರಿಂದ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಹಲವು ಜನಮುಖಿ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ….ಒಂಬತ್ತು ಬಾರಿ ರಕ್ತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ….ಇವರ ಜನಮುಖಿ ಕಾರ್ಯಗಳಿಗೆ ಹಲವು ಸಂಘ ಸಂಸ್ಥೆಗಳು ಸತ್ಕರಿಸಿವೆ…