12ರಂದು  ಎಸ್.ಎಸ್.ಎ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನಲ್ಲಿ ‘ಮುದ್ರಣ ಮಾಧ್ಯಮ : ಬಹುಮುಖಿ ಆಯಾಮಗಳು’ ಕುರಿತು ವಿಶೇಷ ಉಪನ್ಯಾಸ

ಬಳ್ಳಾರಿ, ಜ.10: ನಗರದ ಎಸ್.ಎಸ್.ಎ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮುದ್ರಣ ಮಾಧ್ಯಮ : ಬಹುಮುಖಿ ಆಯಾಮಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜ.12 ರಂದು ಶುಕ್ರವಾರ ಜರುಗಲಿದೆ.


ಕಾಲೇಜಿನ‌ ಕನ್ನಡ ವಿಭಾಗ ಆಯೋಜಿಸಿರುವ ಕಾರ್ಯಕ್ರಮವನ್ನು ಅಂದು ಬೆಳಿಗ್ಗೆ 10-30ಗಂಟೆಗೆ ಸಾಹಿತಿ, ಪತ್ರಕರ್ತ ಶಿವಮೊಗ್ಗದ ಪ್ರಕಾಶ್ ಕುಗ್ವೆ ಅವರು ಉದ್ಘಾಟಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್ ಕೆ ಮಂಜುನಾಥ್ ರೆಡ್ಡಿ ಅವರು ವಹಿಸುವರು.
ಸಾಹಿತ್ಯ-ಸಂಸ್ಕೃತಿ ಮತ್ತು ಸೃಜನಶೀಲತೆ ಕುರಿತು ಸಾಹಿತಿ, ಪತ್ರಕರ್ತ ಶಿವಮೊಗ್ಗದ ವೀರೇಂದ್ರ ಪಿ ಎಂ ಅವರು ಉಪನ್ಯಾಸ ನೀಡುವರು.
ಜೀವಪರ ಅಭಿವ್ಯಕ್ತಿ ಮತ್ತು ಪ್ರಯೋಗಶೀಲತೆ ವಿಷಯದ ಕುರಿತು ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ ಡಾ. ದಸ್ತಗಿರಿ ದಿನ್ನಿ ಅವರು ಕರ್ನಾಟಕ ಕಹಳೆ ಡಾಟ್ ಕಾಮ್ ಪ್ರತಿನಿಧಿಗೆ ತಿಳಿಸಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ರಾಮಸ್ವಾಮಿ ಬಿ, ಲಿಂಗಪ್ಪ ಮತ್ತು ಪ್ರವೀಣ ಕುಮಾರ್ ಎಂ. ಎನ್ ಅವರು ಕಾರ್ಯಕ್ರಮ ನಿರ್ವಹಿಸುವರು.
—–