ಅನುದಿನ ಕವನ-೧೧೧೫, ಹಿರಿಯ ಕವಿಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ನಾವು

ನಾವು

ನಮ್ಮ ನಮ್ಮ ಮನೆ ದೇವರು
ನಮ್ಮ ನಮ್ಮ ಮನದಲ್ಲಿರಲಿ

ನಮ್ಮ ನಮ್ಮ ಧರ್ಮ
ನಮ್ಮ ನಮ್ಮ ಎದೆಯಲ್ಲಿರಲಿ

ನಮ್ಮ ನಮ್ಮ  ಆಚರಣೆ
ನಮ್ಮ ನಮ್ಮ ಮನೆಯಲ್ಲಿರಲಿ

ನಮ್ಮೆಲ್ಲರ ಆಶೆ- ಕನಸು
ಶಾಂತಿ ನೆಮ್ಮದಿ ಏಳಿಗೆ
ತರತಮವಿಲ್ಲದ ಬಾಳುವೆ

ಮಲಗೆದ್ದು ಗೂಡಿನೊಳಗೆ
ಹಾರುವೆವೆಲ್ಲಾ ಬಾನಿಗೆ
ಇಳಿಯುವೆವೆಲ್ಲಾ ಭೂಮಿಗೆ

-ಸವಿತಾ ನಾಗಭೂಷಣ, ಶಿವಮೊಗ್ಗ
—–