ನೀ…
ನನ್ನ
ತಪ್ಪಷ್ಟೇ ತೇಲಿಸುವೆ
ಸರಿಗಳನ್ನೇಕೆ ಮುಳುಗಿಸುವೆ?
ಮಾತಷ್ಟೇ ಮೊನಚೆನ್ನುವೆ
ಚುಚ್ಚುವ ಹಚ್ಚೆಯನ್ನೇಕೆ ಇಚ್ಚಿಸುವೆ?
ಸಿಟ್ಟಷ್ಟೇ ರಟ್ಟು ಮಾಡುವೆ
ಸಮಾಧಾನವನ್ನೇಕೆ ಗುಟ್ಟಾಗಿಸಿರುವೆ?
ಮೊಂಡುತನವಷ್ಟೇ ತೋರಿಸುವೆ
ಮೊಂಡಿಯೂರಿದ್ದನ್ನೇಕೆ ಮುಚ್ಚಿಟ್ಟಿರುವೆ?
ಎಡವಿದ್ದಷ್ಟೇ ದೊಡ್ಡಾಗಿಸುವೆ
ಎದ್ದು ನಡೆದದ್ದನ್ನೇಕೆ ಸಣ್ಣಾಗಿಸಿರುವೆ?
ಕವಿತೆಯನ್ನು ಸವಿಯುವೆ
ಕವಿಯನ್ನೇಕೆ ಹದಹಾಕಿ ತಿವಿಯುವೆ?
-ಕೆ.ಬಿ.ವೀರಲಿಂಗನಗೌಡ್ರ. ಬಾದಾಮಿ
(ಚಿತ್ರ ಕೃಪೆ:ಕಂದನ್ ಜಿ ಮಂಗಳೂರು)