ಅನುದಿನ ಕವನ-೧೧೪೫, ಕವಿ: ದುಡ್ಡನಹಳ್ಳಿ ಮಂಜುನಾಥ್, ತುಮಕೂರು, ಕವನದ ಶೀರ್ಷಿಕೆ: ಒಂದು ಅಮರ‌ ಪದ್ಯ

ಒಂದು ಅಮರ ಪದ್ಯ

ಆಲ ಹುಣಸೆ ಗುಮ್ಮ
ಅಡಿಕೆ ತೆಂಗಿನ ತಮ್ಮ
ತಾರೆಯರಳಿ
ಬೇವಿನಮ್ಮ
ದೇವರಾಗಿ ಕಾಯ್ವರೆಮ್ಮ

ಅತ್ತಿ ಮತ್ತಿ ಜವಾರಿ
ಅಶೋಕ ಬಂತು ಸವಾರಿ
ಹೊನ್ನೆ ತೇಗ ದುಬಾರಿ
ಜಾಲಿ ಬಿಲ್ವಾರ ಇವರ ಪ್ರಭಾರಿ

ಬೇಲ ನೀಲ ಮದ್ದು
ಗೇರು ಗಂಧ ಮುದ್ದು
ಮಾವು ಹಲಸು ಕದ್ದು
ನೆಲ್ಲಿ ನೇರಳೆ ಮೆದ್ದು

ಈಚಲು ಬಗನಿ ಮದಿರೆ
ಹುಟ್ಟು ಸಾವಿಗೆ ಬಿದಿರೆ
ಕಕ್ಕೆ ಮರದಲ್ಲಿ ಚದುರೆ
ಆಲೆ ಮರದಿಂದ ಕುದುರೆ

ಬಿಲ್ವ ಬೂರುಗ ತಾಳೆ
ಬೀಟೆ ಬಾಗೇ ನೇರಳೆ
ಮರವೇ ನಮ್ಮಯ ಬಾಳೆ
ಮರವೇ ನಮಗೆ ನಾಳೆ

-ದುಡ್ಡನಹಳ್ಳಿ ಮಂಜುನಾಥ್, ತುಮಕೂರು
—–