ಬಳ್ಳಾರಿ: ಇತಿಹಾಸ ಸಹಾಯಕ ಪ್ರಾಧ್ಯಾಪಕಿ ಚೂಡಾಮಣಿ.ಕೆ ಅವರಿಗೆ ಪಿಹೆಚ್‍ಡಿ ಪದವಿ

ಬಳ್ಳಾರಿ,ಮಾ.1: ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚೂಡಾಮಣಿ.ಕೆ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಹೆಚ್‍ಡಿ ಪದವಿಯನ್ನು ಘೋಷಿಸಿದೆ.
ಚೂಡಾಮಣಿ.ಕೆ ಅವರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಹಾಲಿ ಹಂಗಾಮಿ ಕುಲಪತಿಗಳಾಗಿರುವ ಡಾ.ಅನಂತ್‍ಎಲ್.ಝಂಡೇಕರ್ ಅವರ ಮಾರ್ಗದರ್ಶನದಲ್ಲಿ “ಕರ್ನಾಟಕ ಕಾನೂನು ವ್ಯವಸ್ಥೆ ಐತಿಹಾಸಿಕ ಅಧ್ಯಯನ 1800-1948” (ವಿಶೇಷವಾಗಿ ಬಳ್ಳಾರಿ ಪ್ರದೇಶವನ್ನು ಅನುಲಕ್ಷಿಸಿ) ಎಂಬ ಶೀರ್ಷಿಕೆಯಡಿ ಸಂಶೋಧನೆ ಕೈಗೊಂಡು ಮಂಡಿಸಿದ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ನೀಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.

 


——-