ಅನುದಿನ ಕವನ-೧೧೭೮, ಹಿರಿಯ ಕವಯಿತ್ರಿ:ತಿ. ನ. ಲಕ್ಷ್ಮೀಮಲ್ಲಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ನನ್ನಾಸೆ

ನನ್ನಾಸೆ

ಹಚ್ಚ ಹಸಿರೆಡೆಯಲ್ಲಿ
ಪಚ್ಚ ಬಯಲೆದೆಯಲ್ಲಿ
ಪಕ್ಷಿಗಳ ಇಂಚರದ
ನೀರ ನಡುಗಡ್ಡೆಯಲಿ
ಪಕ್ಷಿಗಳ ಇಂಚರದಿ
ಮೈಮರೆತು ನನ್ನ ನಾ ಅರಿತು
ಬಾಳುವ ಸರಳ ಬದುಕೆ ನನಗಿರಲಿ.

ಮುಗ್ಧತೆಯು ಕೌತುಕವು ಬೆಸಗೊಂಡ
ಪಸಿತನದ ಬಾಳೇ ನನ್ನದಾಗಿರಲಿ.

ಧರಣಿಯಲಿ ನಲಿಯುತ
ಸರಳತೆಯ ಬಯಸುತ
ಆಗಸವ ಆರಾಧಿಸುವ
ಭವ್ಯತೆಯ ಮನವಿರಲಿ.

ಬಾನ್ದೇವಿ ವಾಸಂತಿಯರ
ಸೊಗವರಿತ ಮನವಿರಲಿ.

ನಾನು ನಾನಾಗಿ
ವಾಗ್ದೇವಿ ತಾಯಾಗಿ
ಸಕಲರಿಗೆ ಲೇಸ ಬಯಸುತಲೆ
ಮುಕ್ತವಾಗುವ ಬದುಕೇ ನನ್ನದಾಗಿರಲಿ.


-ತಿ. ನ. ಲಕ್ಷ್ಮೀಮಲ್ಲಯ್ಯ, ಬೆಂಗಳೂರು
—–