ಹೊಸಪೇಟೆಯಲ್ಲೂ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಶ್ರದ್ಧಾಪೂರ್ವಕ ನಮನ

ಹೊಸಪೇಟೆ: ನಗರದ ಜೈ ಭೀಮ ವೃತ್ತದಲ್ಲಿ ಭಾನುವಾರ ಮಹಾಮಾನವತಾವಾದಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ವಿಶ್ವ ಜ್ಞಾನಿ ಬಾಬಾಸಾಹೇಬರಿಗೆ ಗೌರವ ನಮನ ಸಲ್ಲಿಸಲಾಯಿತು.
ತಾಲೂಕು ಡಾ|| ಬಿ.ಆರ್. ಅಂಬೇಡ್ಕರ್ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪದಾಧಿಕಾರಿಗಳು ಸೇರಿದಂತೆ ಹೊಸಪೇಟೆಯ ಹಲವು ಸಂಘಟನೆಗಳ ಮುಖಂಡರುಗಳು ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಬಳಿಕ ಎರಡು ನಿಮಿಷಗಳ ಕಾಲ ಮೌನಾಚರಣೆ, ಬುದ್ಧಂ ಶರಣಂ ಗಚ್ಛಾಮಿ ಶ್ಲೋಕವನ್ನು ಪಠಿಸಿದರು.
ಈ ಸಂದರ್ಭದಲ್ಲಿ ಹೊಸಪೇಟೆ ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಸಿ.ವೀರಸ್ವಾಮಿ,ಮುಖಂಡರಾದ ಇಮಾಮ್ ನಿಯಾಜಿ, ಮೆಶಾಕ ಅಂಕಾಳಿ, ಸೋಮಶೇಖರ ಬಣ್ಣದಮನೆ, ದುರ್ಗಪ್ಪ ಪೂಜಾರ್, ದುರುಗಪ್ಪ,ಹುಲುಗಣ್ಣ,ಎರ್ರಿಸ್ವಾಮಿ,ಬಿ.ಮಾರೆಣ್ಣ, ನಿಂಬಗಲ್ ರಾಮಕೃಷ್ಣ, ಸೇಲ್ವಂ,ಸಣ್ಣ ಮಾರೇಪ್ಪ,ಸ್ಲಂ ವೆಂಕಟೇಶ,ಶೇಷು,ಬಿ.ಇ.ಶೇಕ್ಷವಲಿ,ಪರಶುರಾಮ, ಪಂಪಾಪತಿ,ವಿಜಯ್ ಕುಮಾರ್,ಅಣ್ಣಮಲೈ,ಮಲ್ಲಿ, ಜೆ.ಬಿ.ರಾಘವೇಂದ್ರ,ಓಬಳೇಶ, ವಿದ್ಯಾರ್ಥಿ ಮುಖಂಡ
ಸಿ ಆರ್ ಭರತ್ ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.
(ಫೋಟೊ-ಮಾಹಿತಿ: ಸಿ ಆರ್ ಭರತ್ ಕುಮಾರ್, ಪತ್ರಿಕೋದ್ಯಮ ವಿದ್ಯಾರ್ಥಿ, ಹೊಸಪೇಟೆ)