ಅನುದಿನ ಕವನ-೧೧೭೯, ಕವಯಿತ್ರಿ: ಅಶ್ವಿನಿ ಬಿ ವಡ್ಡಿನಗದ್ದೆ, ಬೆಂಗಳೂರು

ಅದು ಹಾಗಲ್ಲ ಬಿಡು ನಾನು
ಅರ್ಥೈಸಿಕೊಂಡಿರುದೇ ತಪ್ಪಾಗಿದೆ..
ನಿನ್ನಲ್ಲಿ ವಿಶೇಷತೆಗಳಿವೆ
ನಾನು ಅಂದುಕೊಂಡ  ಹಾಗಲ್ಲ ನೀನು!

ಅಪರೂಪಕ್ಕೊಂದು ಚುಕ್ಕಿ ಇಟ್ಟು
ಮಾತಿಗೆ ಎಳೆಯುವ ನೀನು ನಿಗೂಢ..
ಹಾಗೇ ಕ್ಷಣ ಮಾತ್ರದಲ್ಲೇ ಮೌನವಾಗುವ
ನಿನ್ನೊಡನೆ ಮಾತನ್ನು ಮೌನವಾಗೇ
ಆಡಿಬಿಡಬೇಕು ಬಿಡು!

ನಿನ್ನ ಈ ನಿಗೂಢ ವರ್ತನೆಯೇ ನಿನ್ನೊಡನೆ
ಮಾತನಾಡಲು ಹುರಿದುಂಬಿಸುತ್ತೆ ಇನ್ನೂ..
ಮಾತನಾಡಿ ಆಡಿ ನಾನೊಬ್ಬಳೇ ನಿನ್ನ ಸಿಟ್ಟಿಗೂ ಗುರಿಯಾಗುವುದರಲ್ಲೂ ಒಂದು ಮಜವಿದೆ
ಬಿಡು!

ನನ್ನ ಮಾತನ್ನು ಕೇಳಿ ನೋಡಿದ ನೀನು ನಕ್ಕು ಸುಮ್ಮನಾಗುವುದೂ ಗೊತ್ತಿದೆ..
ಆದರೂ ಒಂದು ಬಾರಿ ಮಾತನಾಡಿಬಿಡು
ಮೌನವಾಗಿಯೇ!!


-ಅಶ್ವಿನಿ ಬಿ ವಡ್ಡಿನಗದ್ದೆ, ಬೆಂಗಳೂರು
——