ಗಜಲ್
ನಮ್ಮ ನೋವಿಗೆ ಯಾರು ಮುಲಾಮು ಹಚ್ಚುತ್ತಾರೆ ಗೆಳೆಯ
ನೊಂದ ಜೀವವನ್ನೆ ಮತ್ತೆ ಯಾಕೆ ಚುಚ್ಚುತ್ತಾರೆ ಗೆಳೆಯ
ಇರಿವ ಮಾತಿಗೆ ಗಾಯವಾಗಿ
ನೆರಳುತಿದೆ ಬದುಕು ಇಲ್ಲಿ
ಹಪಾ ಹಪಿ ತನಕೆ ಬೇರೊಬ್ಬರನು ತಿವಿಯುತ್ತಾರೆ ಗೆಳೆಯ
ಯಾರ ಮಾತಿಗೂ ಬೇಲೆ ಇಲ್ಲವಾಗಿದೆ ಇವರ ಹುಚ್ಚಿಗೆ
ಬರಿ ಸುಳ್ಳನ್ನು ತಲೆಯಲ್ಲಿ ತುಂಬಿ ಜಗಳ ತಂದಿಡುತ್ತಾರೆ ಗೆಳೆಯ
ಹಲವು ಬಣ್ಣದ ಮಾತು ಸುಣ್ಣದ ನೀರಿನಂತೆ ಕಾಣುತ್ತದೆ
ದಾರಿದ್ರ್ಯ ಹೋಗಲಾಡಿಸುವ ಅಂದ ಚಂದದ ಮಾತಾಡುತ್ತಾರೆ ಗೆಳೆಯ
ಹಗಲು ಕಂಡ ಭಾವಿಗೆ ತಳ್ಳಿ
ಹೋಗುವರು ನೋಡು
ಮರುಳ ಒಳ್ಳೆಯತನವ ಕೊಳ್ಳಿ ಇಟ್ಟು ಬೆಂಕಿ ಇಡುತ್ತಾರೆ ಗೆಳೆಯ
-ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ