ಅನುದಿನ ಕವನ-೧೧೯೭, ಹಿರಿಯ ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ, ಚಿತ್ರ: ಸಿದ್ಧರಾಮ ಕೂಡ್ಲಿಗಿ

ಬಗೆದಷ್ಟು ಆಳ ಈ ಭುವಿ
ತೆರೆದಷ್ಟು ವಿಶಾಲ ಈ ವ್ಯೋಮ
ಬೇಧಿಸಬಹುದೇ ಈ ರಹಸ್ಯವ
ನಿಲುಕದಷ್ಟು ನಿಗೂಢ ಈ ಬ್ರಹ್ಮಾಂಡ

ಲೆಕ್ಕವಿಲ್ಲದಷ್ಟು ತಾರೆಗಳಿವೆ ಎಲ್ಲೆಲ್ಲೂ ಕತ್ತಲು
ಚಂದಿರನು ಒಬ್ಬನೇ ಹಾಲು ಬೆಳದಿಂಗಳು
ಒಬ್ಬನೇ ಸೂರ್ಯ ಸಾಕು ಓಡಿಸಲು ತಮಂಧವ
ಏನೆಂಬೆ ಮನುಜ ಈ ಸೃಷ್ಟಿ ವೈಚಿತ್ರ್ಯಕೆ

ಹುಟ್ಟಿ ಬಂದಿರುವೆವು ನಾವು ಬಾಳಿ ಬದುಕಲು
ಅನಿವಾರ್ಯ ಕರ್ಮವಿದು ಬಿಡದ ನಂಟು
ಪ್ರಕೃತಿ ಕರುಣಿಸಿದ ವರವಿದೆಂದು ಅರಿತು
ನೀಡು ಅದಕೊಂದು ಅರ್ಥ ಸಾರ್ಥಕವಾಗುವುದು                 

-ಅರುಣಕುಮಾರ್ ಹಬ್ಬು, ಹುಬ್ಬಳ್ಳಿ
—-