ಬಳ್ಳಾರಿ, ಏ.13: ಕಥೆಗಾರ ಕುಂಬಾರ ಭುವನೇಶ ಮೋಕಾ ಅವರ ಧರೆಗೆ ದೊಡ್ಡವರು ಕಥಾಸಂಕಲನ ಬಿಡುಗಡೆ ಸಮಾರಂಭ ಏ.14 ರಂದು ಭಾನುವಾರ ನಗರದ ರಾಘವ ಕಲಾ ಮಂದಿರದಲ್ಲಿ ಬೆ. 10-30 ಗಂಟೆಗೆ ಜರುಗಲಿದೆ.
ಹಿರಿಯ ಚಿಂತಕ, ಲೋಹಿಯಾ ಪ್ರಕಾಶನದ ಸಿ. ಚನ್ನ ಬಸವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕರು ವಿದ್ವಾಂಸರೂ ಆದ ಪ್ರೊ. ಕೆ. ಎಂ. ಮೇತ್ರಿ ಅವರು ಧರೆಗೆ ದೊಡ್ಡವರು ಕೃತಿ ಲೋಕಾರ್ಪಣೆ ಗೊಳಿಸುವರು.
ಕವಿ-ಚಿಂತಕ ಬಿ.ಪೀರ್ ಬಾಷ ಅವರು ಕೃತಿ ಪರಿಚಯಿಸುವರು.
ಕಥೆಗಾರ ಕುಂಬಾರ ಭುವನೇಶ ಮೋಕಾ ಅವರು ಉಪಸ್ಥಿತರಿರುವರು.
ಕಥಾ ಸಂಕಲನವನ್ನು ಮೋಕದ ಸರ್ವಜ್ಞ ಪ್ರಕಾಶನ ಪ್ರಕಟಿಸಿದ್ದು, ಬಳ್ಳಾರಿ ಜಿಲ್ಲಾ ಕುಂಬಾರರ ಸಂಘ ಮತ್ತು ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ ತಿಳಿಸಿದ್ದಾರೆ.
——-