ಅನುದಿನ ಕವನ-೧೨೦೪, ಕವಿ: ಜಹಾಂಗೀರ್.ಎಂಎಸ್, ಮರಿಯಮ್ಮನಹಳ್ಳಿ

ಎರೆಹುಳು
ಎಂದು ಹೇಳಿ
ಹೆಗಲೇರಿ
ನಡು ಬೆನ್ನಿಗಿಳಿದ ಮೇಲೆ

ತಾನು ಕೊಳಕು ಮಂಡಲ
ಎಂದು
ಉಸಿರ ಬಿಟ್ಟರೆ
ಹೇಳುವುದಕ್ಕೇನಿದೆ ?

ಅಜ್ಜ
ಮುತ್ತಜ್ಜಂದಿರ
ಕಾಲದಿಂದಲೂ
ಮನುಷ್ಯ

ಎರೆಹುಳು. ಕೊಳಕು ಮಂಡಲ,
ಕ್ರಿಮಿ- ಕೀಟ ರೋಗ-ರುಜಿನಿ
ಪೀಡೇ-ಭಾದೆಗಳೊಂದಿಗೆ
ಬದುಕಿದ್ದು…

ಒಪ್ಪತ್ತಿನ ಕೂಳಿಗಾಗಿ
ನಾಳೆಯ ಹಿಡಿ ಕಾಳಿಗಾಗಿ
ಎಲ್ಲಕ್ಕಿಂತ ಹೆಚ್ಚಾಗಿ
ಒಂದು ಘನತೆಯುತ ಬಾಳಿಗಾಗಿ

ಸವ೯ಶಕ್ತ ಭಗವಂತನೇ
ಕೂಳಿನಂತೆ
ಕಾಳಿನಂತೆ ಒಂದೊಳ್ಳೇ ಬಾಳನ್ನೂ
ಸವ೯ರಿಗೂ ದಯಪಾಲಿಸು.

-ಜಹಾಂಗೀರ್.ಎಂಎಸ್, ಬೆಂಗಳೂರು
—–

One thought on “ಅನುದಿನ ಕವನ-೧೨೦೪, ಕವಿ: ಜಹಾಂಗೀರ್.ಎಂಎಸ್, ಮರಿಯಮ್ಮನಹಳ್ಳಿ

Comments are closed.