ಅನುದಿನ ಕವನ-೧೨೧೬, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ‌ಹಡಗಲಿ, ಕವನದ ಶೀರ್ಷಿಕೆ: ಅಮೂಲ್ಯ ಮತ

ಅಮೂಲ್ಯ ಮತ                                              (ಮತದಾನ ಜಾಗೃತಿ ಕವನ)

ಮತವನ್ನು ಚಲಾಯಿಸೋಣ ಬನ್ನಿ
ಜೊತೆಗೆ ನಿಮ್ಮವರನ್ನೂ ಕರೆ ತನ್ನಿ
ಜಾತಿ ಮತ ಭೇದಗಳನ್ನು ದೂಡಿ ಬಿಡಿ
ಜಾತ್ಯಾತೀತತೆಯೇ ನಮ್ಮಯ ಬಲವು ಅರುಹಿಬಿಡಿ //

ನಿಮ್ಮ ಆಯ್ಕೆಯು ಸ್ವಂತಿಕೆಯಾಗಲಿ
ಒತ್ತಲೇಬೇಡಿ ಓಟಿಗೆ ನೋಟು ಪಡೆದು
ಪ್ರಜಾಪ್ರಭುತ್ವದಲ್ಲಿ ನಿಷ್ಠೆಯು ಇರಲೇಬೇಕು
ಆಸೆ ಅಮಿಷಗಳನ್ನು ಹಾಕಿ ತೊಡೆದು //

ಯಾವುದೇ ಪಕ್ಷಗಳಿರಲಿ
ನಿಷ್ಪಕ್ಷಪಾತ ಪಾರದರ್ಶಕವಾಗಿರಲಿ
ಮತಗಳ ಮಾರಿಕೊಂಡರೆ ಅಪರಾಧ
ನಿಮ್ಮ ಮತ ದೇಶದ ಏಳಿಗೆಗೆ ಹಿತವಾಗಿರಲಿ//

ಒಂದು ದಿನದ ಕಾಸಿಗಾಸೆಪಟ್ಟರೆ
ಕಾಯಬೇಕು ಮತಬಾಂಧವ ಐದು ವರ್ಷ
ಹೆಂಡ – ಸಾರಾಯಿಗೆ ಕೈಚಾಚಿ ಹಲ್ಕಿರಿದರೆ
ಹಣೆಪಟ್ಟಿ ಕಟ್ಟುವರು ಕುಡಿತದ ದಾಸ //

ಹಣ,ಆಮಿಷ, ತಂತ್ರ, ಕುತಂತ್ರಕ್ಕೆ ಸಿಲುಕಿದರೆ
ಆಗುವಿರಿ ನೀವುಗಳು ಅತಂತ್ರ
ನ್ಯಾಯ, ನೀತಿ, ಧರ್ಮದಲ್ಲಿ ಸದಾ ನಡೆಯಲು
ಉಳಿದೀತು ನಮ್ಮಸ್ವಾಭಿಮಾನದ ಸ್ವಾತಂತ್ರ್ಯ //

-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ